ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಬಾಲಪರಾಧಿ ಬಾಲಮಂದಿರದಿಂದ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.3- ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಬಾಲಪರಾಧಿ ನಗರದ ಬಾಲಮಂದಿರದಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಮದ್ದೂರಿನ ಗೆಜ್ಜಲಗೆರೆ ಗ್ರಾಮದ ವಿಶ್ವಾಸ್(17) ಪರಾರಿಯಾಗಿರುವ ಬಾಲಪರಾಧಿ. ಕಳೆದ ಮೂರು ತಿಂಗಳ ಹಿಂದೆ ವಿಶ್ವಾಸ್ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಮದ್ದೂರು ಪೊಲೀಸರು ಬಂಧಿಸಿ ಈತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರಿನ ಬಾಲಮಂದಿರಕ್ಕೆ ಕಳುಹಿಸಿದ್ದರು. ವಿಶ್ವಾಸ್ ನಿನ್ನೆ ಬಾಲಮಂದಿರದಿಂದ ಪರಾರಿಯಾಗಿದ್ದು, ಮೈಸೂರು ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

Facebook Comments

Sri Raghav

Admin