ಉತ್ತರ ಕೊರಿಯಾದಿಂದ ಹೈಡ್ರೋಜನ್ ಬಾಂಬ್ ಅಭಿವೃದ್ದಿ, ಮತ್ತೆ 6ನೇ ಅಣ್ವಸ್ತ್ರ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

North-Kerea-01

ಸಿಯೋಲ್, ಸೆ.3-ದೀರ್ಘ-ಅಂತರದ ಕ್ಷಿಪಣಿಗೆ ಸೇರಿಸಬಲ್ಲ ಅತ್ಯಂತ ಪ್ರಬಲ ಹೈಡ್ರೋಜೆನ್ ಬಾಂಬ್‍ನನ್ನು ತಾನು ಅಭಿವೃದ್ಧಿಗೊಳಿಸಿರುವುದಾಗಿ ಯುದ್ಧೋನ್ಮಾದ ಉತ್ತರ ಕೊರಿಯಾ ಹೇಳುವ ಮೂಲಕ ಮತ್ತೊಂದು ಭಾರೀ ಆತಂಕ ಸೃಷ್ಟಿಸಿದೆ. ಇದೇ ವೇಳೆ, ಆ ದೇಶವು ಇಂದು ಆರನೇ ಆಣ್ವಸ್ತ್ರ ಪರೀಕ್ಷೆ ನಡೆಸಿರುವ ಸಾಧ್ಯತೆಯು ಇದ್ದು, ಇದಕ್ಕೆ ಪುಷ್ಠಿ ನೀಡುವಂತೆ ಹ್ಯಾಮ್‍ಗೇಯಿಂಗ್ ಪ್ರಾಂತದಲ್ಲಿ ಕೃತಕ ಭೂಕಂಪ ಸೃಷ್ಟಿಯಾಗಿದೆ.

ಉತ್ತರ ಕೊರಿಯಾ ಆರನೇ ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿರುವುದು ಬಹುತೇಕ ಖಚಿತವಾಗಿದೆ ಎಂದು ದಕ್ಷಿಣ ಕೊರಿಯಾದ ಯೊನ್‍ಜ್ಯಾಯಂಪ್ ವಾರ್ತಾ ಸಂಸ್ಥೆ ತಿಳಿಸಿದೆ. ಉತ್ತರ ಕೊರಿಯಾದ ಈಶಾನ್ಯ ಭಾಗದಲ್ಲಿರುವ ಸಂಗ್ಜಿಬಿಯಾಗಮ್‍ನಿಂದ 24 ಕಿ.ಮೀ. ದೂರದಲ್ಲಿ 5.1 ತೀವ್ರತೆಯ ಗಣಿ ಸ್ಫೋಟ ಸಂಭವಿಸಿದ್ದು ಭಾರೀ ಕಂದಕ ಉಂಟಾಗಿದೆ ಎಂದು ಯುಎಸ್‍ಜಿಎಸ್ ವರದಿ ಮಾಡಿದೆ. ಇದು ಅಣ್ವಸ್ತ್ರ ಪಯೋಗದ ಪರಿಣಾಮ ಎಂದು ಬಣ್ಣಿಸಲಾಗಿದೆ.
ತಾನು ಜಲಜನಕ ಬಾಂಬ್ ಇರುವ ದೂರಗಾಮಿ ಕ್ಷಿಪಣಿಯನ್ನು ಅಭಿವೃದ್ದಿಗೊಳಿಸಿರುವುದಾಗಿ ಉತ್ತರ ಕೊರಿಯಾ ಹೇಳಿಕೆ ನೀಡಿದ ಕೆಲವು ಗಂಟೆಗಳ ನಂತರ ಈ ಘಟನೆ ಸಂಭವಿಸಿದ್ದು, ಭಾರೀ ಆತಂಕ ಸೃಷ್ಟಿಯಾಗಿದೆ.

Facebook Comments

Sri Raghav

Admin