ಕೇಂದ್ರ ಸಂಪುಟ ವಿಸ್ತರಣೆ : ಅನಂತ ಕುಮಾರ್ ಹೆಗ್ಡೆ ಸೇರಿ 9 ಜನ ಹೊಸಬರಿಗೆ ಸಚಿವ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Anant-Hegde----01

ನವದೆಹಲಿ, ಸೆ.3- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಒಂಭತ್ತು ಹೊಸ ಮುಖಗಳು ರಾಜ್ಯ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಲ್ವರು ರಾಜ್ಯ ಸಚಿವರು ಸಂಪುಟ ದರ್ಜೆ ಮಂತ್ರಿಗಳಾ ಬಡ್ತಿ ಪಡೆದಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ರಾಜ್ಯ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯೆಲ್, ನಿರ್ಮಲಾ ಸೀತಾರಾಮನ್ ಮತ್ತು ಮುಖ್ತಾರ್ ಅಬ್ಬಾಸ್ ನಕ್ವಿ, ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.  ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದಿಂದ ಏಕೈಕ ಸಂಸದರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ದೊರೆತಿದ್ದು, ಎಲ್ಲ ವದಂತಿಗಳಿಗೆ ತೆರೆ ಬಿದ್ದಿದೆ. ಮಂತ್ರಿಮಂಡಲದಲ್ಲಿ ಸ್ಥಾನ ಲಭಿಸದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡ ಶಿವಸೇನ ಸಮಾರಂಭ ಬಹಿಷ್ಕರಿಸಿದ್ದು ಪ್ರಮುಖ ಬೆಳವಣಿಗೆಯಾಗಿದೆ. ಜೆಡಿಯು ಸೇರಿದಂತೆ ಹಲವು ಮಿತ್ರಪಕ್ಷಗಳಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ಸಂಸದರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Cabinet

ಭಾರತೀಯ ವಿದೇಶ ಸೇವೆಯ (ಐಎಫ್‍ಎಸ್) ನಿವೃತ್ತ ಅಧಿಕಾರಿ ಪಂಜಾಬ್‍ನ ಹರದೀಪ್ ಸಿಂಗ್‍ಪುರಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೇರಳದ ಅಲ್ಫೋನ್ಸ್ ಕಣ್ಣನ್‍ನಾಥನ್ ಅವರು ಸಂಸತ್ ಸದಸ್ಯರಲ್ಲದಿದ್ದರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಉತ್ತರಪ್ರದೇಶದ ರಾಜ್ಯಸಭಾ ಸದಸ್ಯ ಶಿವಪ್ರತಾಪ್ ಶುಕ್ಲಾ, ಬಿಹಾರದ ಬಕ್ಸರ್ ಲೋಕಸಭಾ ಕ್ಷೇತ್ರದ ಅಶ್ವಿನಿಕುಮಾರ್ ಚೌಬೆ, ಮಧ್ಯಪ್ರದೇಶದ ಟಿಕಮ್‍ಗಢ ಸಂಸದ ವೀರೇಂದ್ರ ಕುಮಾರ್, ಕರ್ನಾಟಕ ಉತ್ತರ ಕನ್ನಡ ಕ್ಷೇತ್ರದ ಅನಂತಕುಮಾರ್, ಬಿಹಾರದ ಅರಾ ಸಂಸದ ರಾಜಕುಮಾರ್ ಸಿಂಗ್, ಪಂಜಾಬ್‍ನ ನಿವೃತ್ತ ಐಎಫ್‍ಎಸ್ ಅಧಿಕಾರಿ ಹರದೀಪ್ ಸಿಂಗ್ ಪುರಿ, ರಾಜಸ್ತಾನದ ಜೋಧ್‍ಪುರ್ ಸಂಸದ ಗಜೇಂದ್ರ ಶೇಖಾವತ್, ರಾಜಸ್ತಾನದ ಭಾಗ್‍ಪತ್ ಲೋಕಸಭಾ ಕ್ಷೇತ್ರದ ಸತ್ಯಪಾಲ್ ಸಿಂಗ್ ಹಾಗೂ ಕೇರಳದ ನಿವೃತ್ತ ಐಐಎಸ್ ಅಧಿಕಾರಿ ಅಲೊನ್ಸ್ ಕಣ್ಣನ್‍ನಾಥನ್ ನೂತನ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಸಂಪುಟ ಸಚಿವರುಗಳು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎನ್‍ಡಿಎ ಮಿತ್ರಪಕ್ಷಗಳ ಮುಖಂಡರು ಸಮಾರಂಭದಲ್ಲಿ ಹಾಜರಿದ್ದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಸಂಪುಟದಲ್ಲಿ ಸ್ಥಾನ ಲಭಿಸದಿದ್ದರೂ, ಆ ಪಕ್ಷದ ಮುಖಂಡರು ಭಾಗವಹಿಸಿದ್ದರು. ತಮ್ಮ ಪಕ್ಷಕ್ಕೂ ಅವಕಾಶ ಲಭಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದಷ್ಟೆ ನಿತೀಶ್ ಪ್ರತಿಕ್ರಿಯಿಸಿದ್ದಾರೆ.

Modi-New-Cabinet--01

ನವ ಸಚಿವರೊಂದಿಗೆ ಮೋದಿ ಸಭೆ :

ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ನವ ಸಚಿವರಿಗೆ ತಮ್ಮ ಅಧಿಕೃತ ನಿವಾಸದಲ್ಲಿ ಮೋದಿ ಉಪಾಹಾರ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಪ್ರಧಾನಿ ಅನೌಪಚಾರಿಕ ಸಭೆ ನಡೆಸಿದರು.

ರಕ್ಷಣಾ ಖಾತೆ ಗೊಂದಲ:

ಭಾನುವಾರ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದ್ದರೂ, ರಕ್ಷಣಾ ಖಾತೆಯನ್ನು ಯಾರಿಗೆ ವಹಿಸಬೇಕು ಎಂಬ ಗೊಂದಲ ಶನಿವಾರ ರಾತ್ರಿಯವರೆಗೆ ಮುಂದುವರಿದಿತ್ತು.

ನಿನ್ನೆ ರಾತ್ರಿ ಮಹತ್ವದ ಸಮಾಲೋಚನೆ :

ಮನೋಹರ ಪರಿಕ್ಕರ್ ರಾಜೀನಾಮೆ ನಂತರ ತೆರವಾದ ಮಹತ್ವದ ರಕ್ಷಣಾ ಖಾತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದು, ಪುನರ್‍ರಚನೆ ವೇಳೆ ಹಿರಿಯ ಸಚಿವರೊಬ್ಬರಿಗೆ ವಹಿಸುವ ನಿಟ್ಟಿನಲ್ಲಿ ವರಿಷ್ಠರು ಶನಿವಾರ ರಾತ್ರಿವರೆಗೆ ಮೂರು ಸುತ್ತಿನ ಮಾತುಕತೆ ನಡೆಸಿದರು. ಹಿರಿಯ ಸಚಿವರಾದ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯಿತು. ಆದರೆ, ರಕ್ಷಣಾ ಖಾತೆಯ ಬಗ್ಗೆ ಅನೇಕರು ನಿರಾಸಕ್ತಿ ತಾಳುತ್ತಿರುವುದರಿಂದ ಗೊಂದಲ ಮುಂದುವರಿದಿದೆ ಎಂದು ತಿಳಿದುಬಂದಿದೆ.

Anant-ku,ar--03

ಹೆಚ್ಚುವರಿಯಾಗಿ ರಕ್ಷಣಾ ಖಾತೆ ನೀಡಿದರೆ ನಿರ್ವಹಿಸಲು ಸಿದ್ಧ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದರು. ಆದರೆ ಪೂರ್ಣ ಪ್ರಮಾಣದಲ್ಲಿ ರಕ್ಷಣಾ ಖಾತೆಯೊಂದನ್ನೇ ನಿರ್ವಹಿಸಬೇಕು ಎಂಬ ವರಿಷ್ಠರ ಸಲಹೆಯನ್ನು ಅವರು ತಳ್ಳಿ ಹಾಕಿದ್ದರಿಂದ ಗೊಂದಲ ಮುಂದುವರಿದಿದೆ. ಮಥುರಾ ಪ್ರವಾಸದಿಂದ ನಿನ್ನೆ ಸಂಜೆ ದೆಹಲಿಗೆ ಮರಳಿದ ಅಮಿತ್ ಷಾ, ಮೋದಿ ಜೊತೆ ರಾತ್ರಿ 8ರಿಂದ 9ರವರೆಗೆ ಚರ್ಚೆ ನಡೆಸಿದ ಬಳಿಕ ಪುನರ್‍ರಚನೆಯ ಕಸರತ್ತನ್ನು ಪೂರ್ಣಗೊಳಿಸಿದ್ದು, ಒಂಭತ್ತು ಜನರ ಹೆಸರನ್ನು ಅಂತಿಮಗೊಳಿಸಿದರು.

ಈಗಾಗಲೇ ಸಚಿವರಾದ ಉಮಾ ಭಾರತಿ, ಕಲ್‍ರಾಜ್ ಮಿಶ್ರಾ, ಬಂಡಾರು ದತ್ತಾತ್ರೇಯ, ರಾಜೀವ್ ಪ್ರತಾಪ್ ರೂಡಿ ಸೇರಿದಂತೆ 7 ಸಚಿವರಿಂದ ರಾಜೀನಾಮೆಯನ್ನು ಮೋದಿ ಸ್ವೀಕರಿಸಿದ್ದಾರೆ.  ಜೆಡಿಯು ಸೇರಿದಂತೆ ಹಲವು ಮಿತ್ರಪಕ್ಷಗಳಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಈ ಬಾರಿ ಬಿಜೆಪಿ ಸಂಸದರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನೂತನ ಸಚಿವರು:

ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಲೋಕಸಭೆ ಕ್ಷೇತ್ರ, ಕರ್ನಾಟಕ)
ಶಿವಪ್ರತಾಪ ಶುಕ್ಲಾ (ರಾಜ್ಯಸಭೆ ಸದಸ್ಯ, ಉತ್ತರ ಪ್ರದೇಶ)
ಅಶ್ವಿನಿಕುಮಾರ್ ಚೌಬೆ (ಬಕ್ಸರ್ ಲೋಕಸಭೆ ಕ್ಷೇತ್ರ, ಬಿಹಾರ)
ವೀರೇಂದ್ರಕುಮಾರ್ (ಟಿಕಂಗಢ್ ಲೋಕಸಭೆ ಕ್ಷೇತ್ರ, ಮಧ್ಯಪ್ರದೇಶ)
ರಾಜಕುಮಾರ್ ಸಿಂಗ್ (ಅರಾ, ಲೋಕಸಭೆ ಕ್ಷೇತ್ರ, ಬಿಹಾರ)
ಹರದೀಪ್ ಸಿಂಗ್ ಪುರಿ (ನಿವೃತ್ತ ಐಎಫ್‍ಎಸ್ ಅಧಿಕಾರಿ, ಪಂಜÁಬï)
ಗಜೇಂದ್ರ ಸಿಂಗ್ ಶೆಖಾವತ್ (ಜೋಧಪುರ, ಲೋಕಸಭೆ, ರಾಜಸ್ಥಾನ)
ಸತ್ಯಪಾಲ್ ಸಿಂಗ್ (ಬಾಗಪತï, ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶ)
ಅಲ್ಫೋನ್ಸï ಕಣ್ಣನ್ ನಾಥನ್ (ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಸಕ್ರಿಯ ಸದಸ್ಯ, ಕೇರಳ)
ಸಂಪುಟ ದರ್ಜೆಗೆ ಬಡ್ತಿ ಪಡೆದ ಸಚಿವರು:
ಮುಖ್ತಾರ್ ಅಬ್ಬಾಸ್ ನಕ್ವಿ
ನಿರ್ಮಲಾ ಸೀತಾರಾಮನ್
ಧರ್ಮೇಂದ್ರ ಪ್ರಧಾನ್
ಪಿಯೂಷ್ ಗೋಯೆಲ್

Facebook Comments

Sri Raghav

Admin