ಜಮೀನು ವಿಚಾರಕ್ಕೆ ಅಕ್ಕನನ್ನೇ ಕೊಂದ ತಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.3- ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನೇ ಅಕ್ಕನನ್ನು ಕೊಲೆ ಮಾಡಿರುವ ಘಟನೆ ಮೈಸೂರು ತಾಲ್ಲೂಕಿನ ಡಿಸಾಲುಂಡಿ ಗ್ರಾಮದಲ್ಲಿ ನಡೆದಿದೆ. ರಾಯನಹುಂಡಿ ಗ್ರಾಮದ ಶಿವಮ್ಮ(60) ಕೊಲೆಯಾದ ಮಹಿಳೆ. ತಮ್ಮ ಬಸಪ್ಪ (50) ಅಕ್ಕನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ನಿನ್ನೆ ಜಮೀನು ವಿಷಯದಲ್ಲಿ ಅಕ್ಕ-ತಮ್ಮನ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ತಮ್ಮ ಬಸಪ್ಪ ಆಕೆಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಶಿವಮ್ಮನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಇಂದು ಬೆಳಗ್ಗೆ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್‍ಗೆ ಕರೆದೊಯ್ಯುವಾಗ ಸ್ವಲ್ಪ ಸಮಯದಲ್ಲೇ ಆಕೆ ಮೃತಪಟ್ಟಿದ್ದಾಳೆ.

ಶಿವಮ್ಮನ ಒಪ್ಪಿಗೆ ಇಲ್ಲದೆ ಮೂರು ಎಕರೆ ಜಮೀನನ್ನು ಬಸಪ್ಪ ಮಾರಿಕೊಂಡಿದ್ದ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗುತಿತ್ತು ಎಂದು ತಿಳಿದು ಬಂದಿದೆ. ಬಸಪ್ಪ ನಾಪತ್ತೆಯಾಗಿದ್ದಾನೆ. ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸಪ್ಪನನ್ನು ಬಂಧಿಸಲು ಬಲೆ ಬೀಸಿದ್ದಾರೆ.

Facebook Comments

Sri Raghav

Admin