ತಪ್ಪಿದ ಏಷ್ಯನ್ ಗೇಮ್ ಅವಕಾಶ, ದಕ್ಕಿದ 25 ಲಕ್ಷ ರೂ. ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Satish-Kuamr

ನವದೆಹಲಿ, ಸೆ.3-ದಕ್ಷಿಣ ಕೊರಿಯಾದಲ್ಲಿ ನಡೆದ 2002ರ 14ನೇ ಏಷ್ಯನ್ ಗೇಮ್ಸ್‍ನಲ್ಲಿ ಭಾಗವಹಿಸಲು ದೋಷಪೂರಿತ ನಿರ್ಧಾರದಿಂದ ಅವಕಾಶ ವಂಚಿತರಾದ ಕುಸ್ತಿಪಟು ಸತೀಶ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಭಾರತ ಕುಸ್ತಿ ಒಕ್ಕೂಟಕ್ಕೆ (ಡಬ್ಲ್ಯುಎಫ್‍ಐ) ಆದೇಶ ನೀಡಿದೆ. ಉದ್ದೀಪನ ಔಷಧಿ ತೆಗೆದುಕೊಂಡಿದ್ದಾರೆ ಎಂಬ ತಪ್ಪು ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಕ್ಕೆ ಸತೀಶ್ ಅವರಿಗೆ ಒಕ್ಕೂಟ ನಿರ್ಬಂಧಿಸಿತ್ತು.

ಕುಸ್ತಿಪಟುವಿಗೆ ನಷ್ಟ ಪರಿಹಾರ ನೀಡುವಂತೆ ಸೂಚನೆ ನೀಡಿದ ಹೈಕೋರ್ಟ್, ತಪ್ಪು ನಿರ್ಣಯ ಕೈಗೊಂಡು ಪ್ರತಿಭಾವಂತನಿಗೆ ಏಷ್ಯಾ ಕ್ರೀಡಾ ವೇದಿಕೆಯಲ್ಲಿ ಅವಕಾಶ ತಪ್ಪುವಂತೆ ಮಾಡಿದ ಒಕ್ಕೂಟದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.  ಜಾಗತಿಕ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲಲು ಭಾರತ ಶ್ರಮಿಸುತ್ತಿರುವ ಸಂದರ್ಭದಲ್ಲೇ ಇಂಥ ಪ್ರಮಾದ ನಡೆಸಿದ ಒಕ್ಕೂಟದ ಉನ್ನತಾಧಿಕಾರಿಗಳ ನಿರ್ಧಾರವನ್ನು ನ್ಯಾಯಾಲಯ ಛೇಡಿಸಿದೆ.

Facebook Comments

Sri Raghav

Admin