ದತ್ತಪೀಠ ಸುಪ್ರೀಂ ಆದೇಶ ಉಲ್ಲಂಘಿಸಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

C-TRaviಬೆಂಗಳೂರು, ಸೆ.3- ಚಿಕ್ಕಮಗಳೂರಿನ ದತ್ತಪೀಠ ವಿವಾದದ ಬಗ್ಗೆ ಮುಜರಾಯಿ ಆಯುಕ್ತರ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಬೇಕೆಂಬ ಸುಪ್ರೀಂಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಉಲ್ಲಂಘಿಸಿದ್ದು, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.  ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಮೂರು ಮಂದಿ ಸದಸ್ಯರ ಸಮಿತಿ ರಚನೆ ಮಾಡುವ ಮೂಲಕ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತಿದೆ. ಹಿಂದು ಅರ್ಚಕರ ನೇಮಕಾತಿ ಬದಲು ಸಮಿತಿ ರಚನೆಯ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದರು.  ದತ್ತಪೀಠ ವಿವಾದ ಬಗೆಹರಿಸುವ ಬಗ್ಗೆ ಸುಪ್ರೀಂಕೋರ್ಟ್‍ಗೆ ವಾಗ್ದಾನ ನೀಡಿತ್ತು. 8 ವಾರಗಳಲ್ಲಿ ವಿವಾದವನ್ನು ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೂ ರಾಜ್ಯ ಸರ್ಕಾರ ನಿರ್ದೇಶನವನ್ನು ಪಾಲಿಸಿಲ್ಲ. ವಿವಾದ ಬಗೆಹರಿಸುವ ಇಚ್ಚಾಸಕ್ತಿಯು ಸರ್ಕಾರಕ್ಕಿಲ್ಲ ಎಂದು ಟೀಕಿಸಿದರು.

ದತ್ತಪೀಠ ವಿಚಾರದಲ್ಲಿ ಹಿಂದುಗಳ ಪರವಾಗಿ ತೀರ್ಪು ಬಂದರೂ ಕೂಡ ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಳಿಗೆ ಅನ್ಯಾಯ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದ ಅವರು, ಮಂಗಳೂರಿನ ಶಾಂತಿಯುತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿರುವುದು ಖಂಡನೀಯ. ಹೋರಾಟ ಹತ್ತಿಕ್ಕಲು ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ನಿಲ್ಲುವುದಿಲ್ಲ ಎಂದರು. ನಕ್ಸಲರಿಗೆ ಆದರಾತಿಥ್ಯಕೊಟ್ಟು ಪ್ರಕರಣಗಳನ್ನು ಕುಲಾಸೆಗೊಳಿಸುವ ಸರ್ಕಾರ ಬಿಜೆಪಿಯ ಹೋರಾಟವನ್ನು ತಡೆಯುತ್ತಿದೆ. ಪಿಎಫ್‍ಐ ಮತ್ತು ಎಎಫ್‍ಡಿ ಜತೆ ಸರ್ಕಾರ ನಂಟಸ್ಥಿಕೆ ಬೆಳೆಸುವ ಬದಲು ತಕ್ಷಣ ನಿಷೇಧಿಸಬೇಕು. ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಆ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಿದರು. ಅರಣ್ಯಸಚಿವ ರಮಾನಾಥ ರೈ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

Facebook Comments

Sri Raghav

Admin