ಮಹಿಳೆ ಹೆಗಲಿಗೆ ದೇಶದ ರಕ್ಷಣೆ ಹೊಣೆ

ಈ ಸುದ್ದಿಯನ್ನು ಶೇರ್ ಮಾಡಿ

Nirmala-Seetaram--01

ನವದೆಹಲಿ, ಸೆ.3-ಹಲವು ಅಚ್ಚರಿಗಳಿಗೆ ಕಾರಣವಾದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಿಂದೆಯೇ ಪುನರ್ ರಚನೆಯಲ್ಲೂ ಮಹತ್ವದ ಬದಲಾವಣೆಗಳು ಕಂಡು ಬಂದಿದೆ. ಸಂಪುಟ ದರ್ಜೆ ಸಚಿವರಾಗಿ ಬಡ್ತಿ ಪಡೆದ ನಿರ್ಮಲಾಸೀತಾರಾಮನ್ ಅವರನ್ನು ರಕ್ಷಣಾ ಸಚಿವರಾಗಿ ನೇಮಕ ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ಮಹಿಳೆಯೊಬ್ಬರು ಅತ್ಯಂತ ಜವಾಬ್ದಾರಿಯುತ ರಕ್ಷಣಾ ಖಾತೆಗೆ ನೇಮಕಗೊಂಡಿರುವುದು ಇದೇ ಪ್ರಪ್ರಥಮ. ಸುಷ್ಮಾ ಸ್ವರಾಜ್ ಅವರನ್ನು ವಿದೇಶಾಂಗ ಖಾತೆಗೆ ನೇಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಖಾತೆಗೆ ನೇಮಿಸುವ ಮೂಲಕ ಮಹಿಳೆಯರಿಗೆ ಗೌರವ ನೀಡಿದ್ದಾರೆ.

ಈ ಹಿಂದೆ ವಾಣಿಜ್ಯ ಸಚಿವರಾಗಿದ್ದ ನಿರ್ಮಲಾ ಅವರು ನೂತನ ರಕ್ಷಣಾ ಸಚಿವರಾಗಿದ್ದಾರೆ. ಈ ಮುನ್ನ ಅರುಣ್‍ಜೇಟ್ಲಿ ಅವರು ಆರ್ಥಿಕ ಖಾತೆಯೊಂದಿಗೆ ರಕ್ಷಣಾ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಸಂಪುಟ ಸಚಿವರಾಗಿ ಬಡ್ತಿ ಪಡೆದಿರುವ ಪಿಯೂಷ್ ಗೋಯಲ್ ಅವರಿಗೆ ರೈಲ್ವೆ, ಸುರೇಶ್‍ಪ್ರಭು ಅವರಿಗೆ ವಾಣಿಜ್ಯ ವ್ಯವಹಾರಗಳ ಖಾತೆ, ಸ್ಮೃತಿ ಇರಾನಿ ಅವರಿಗೆ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ನೀಡುವ ಸಾಧ್ಯತೆ ಇದೆ. ಕರ್ನಾಟಕದಿಂದ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಅನಂತ್‍ಕುಮಾರ್ ಹೆಗ್ಡೆ ಅವರಿಗೆ ಕೌಶಲ್ಯಾಭಿವೃದ್ಧಿ ಖಾತೆ ಲಭಿಸುವ ಸಾಧ್ಯತೆಗಳಿವೆ.

Facebook Comments

Sri Raghav

Admin