ನೂತನ ಸಚಿವರ ಜ್ಞಾನದಿಂದ ಸಂಪುಟ ಮೌಲ್ಯ ಹೆಚ್ಚಾಗಿದೆ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Cab

ನವದೆಹಲಿ, ಸೆ.3-ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರ ಅನುಭವ ಮತ್ತು ಜ್ಞಾನದಿಂದ ಮಂತ್ರಿ ಮಂಡಲದ ಮೌಲ್ಯ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.   9 ನೂತನ ರಾಜ್ಯ ಸಚಿವರು ಹಾಗೂ ಸಂಪುಟ ದರ್ಜೆಗೆ ಬಡ್ತಿ ಪಡೆದ ನಾಲ್ವರು ಮಂತ್ರಿಗಳನ್ನು ಅಭಿನಂದಿಸಿದ ಮೋದಿ, ಜನಮುಖಿಯಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಪ್ರಮಾಣ ವಚನ ಸಮಾರಂಭ ಮುಗಿದ ಸ್ವಲ್ಪ ಹೊತ್ತಿನಲ್ಲೇ ಟ್ವೀಟ್ ಮಾಡಿರುವ ಮೋದಿ, ನಿಮ್ಮಿಂದ ಅತ್ಯುತ್ತಮ ಸೇವೆ ಮತ್ತು ಪ್ರಗತಿ ಕಾರ್ಯಗಳನ್ನು ಪ್ರತೀಕ್ಷಿಸುವುದಾಗಿ ಹೇಳಿದ್ದಾರೆ.

Facebook Comments

Sri Raghav

Admin