ಬಿಬಿಎಂಪಿ ಎಂಜಿನಿಯರ್ ಸೇರಿ ಐವರ ವಿರುದ್ಧ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

FIR-KNP

ಬೆಂಗಳೂರು, ಸೆ.3-ಟಿಡಿಆರ್ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಎಂಜಿನಿಯರ್ ದೇವರಾಜ್ ಸೇರಿದಂತೆ ಐವರ ವಿರುದ್ಧ ಬಿಎಂಟಿಎಫ್‍ನಲ್ಲಿ ಎಫ್‍ಐಆರ್ ದಾಖಲಾಗಿದ್ದು, ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಕೆ.ಆರ್.ಪುರ ವ್ಯಾಪ್ತಿಯ ಬಸವನಪುರ ಗ್ರಾಮದ ಸರ್ವೆ ನಂ.26/3ರ ಭೂಮಿಗೆ ಅಕ್ರಮವಾಗಿ ಟಿಡಿಆರ್ ನೀಡಲಾಗಿತ್ತು. ಈ ಅಕ್ರಮದ ಹಿನ್ನೆಲೆಯಲ್ಲಿ ಬಿಬಿಎಂಪಿ ಎಂಜಿನಿಯರ್ ದೇವರಾಜ್, ಮಧ್ಯವರ್ತಿಗಳಾದ ಕೆ.ಮುನಿರಾಜು, ಗೋಪಿ, ಅವಿನಾಶ್, ಬಿ.ಗಜೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆ.ಆರ್.ಪುರದಲ್ಲಿರುವ ಸರ್ವೆ ನಂ.26/3, 26/2ರ ಜಮೀನಿನ ಕೇಸು ನ್ಯಾಯಾಲಯದಲ್ಲಿದೆ. ಇದನ್ನು ಮರೆಮಾಚಿ ಈ ಆರೋಪಿಗಳು ಇದೇ ಜಮೀನಿಗೆ ಮುನಿರಾಜುನನ್ನು ಮಾಲೀಕ ಎಂದು ತೋರಿಸಿ ನಕಲಿ ದಾಖಲೆ ಸೃಷ್ಟಿಸಿ ಎಂಜಿನಿಯರ್ ದೇವರಾಜ್ ಮತ್ತಿತರ ನೆರವಿನೊಂದಿಗೆ ಸದರಿ ಜಮೀನು ತಮ್ಮದು. ಆದರೆ ರಸ್ತೆ ಅಗಲೀಕರಣಕ್ಕಾಗಿ ಇದು ಬಿಟ್ಟುಕೊಡುವುದಾಗಿ ಪಾಲಿಕೆಯಲ್ಲಿ ಟಿಡಿಆರ್ ಪಡೆದುಕೊಂಡಿದ್ದರು.

ಇದರಿಂದ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿತ್ತು. ಇವರ ಅಕ್ರಮಗಳನ್ನು ಪತ್ತೆ ಹಚ್ಚಿದ ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್, ದಾಖಲೆ ಸಮೇತ ಬಿಎಂಟಿಎಫ್‍ಗೆ ಇವರ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಬಿಎಂಟಿಎಫ್ ತನಿಖೆ ಪ್ರಾರಂಭಿಸಿ ಆರೋಪಿಗಳಲ್ಲಿ ಗೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin