ಮೋದಿ ಚೀನಾ ಪ್ರವಾಸ ಆರಂಭ : ಉಗ್ರರ ನಿಗ್ರಹಕ್ಕೆ ಚೀನಾ ಮೇಲೆ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

Modi--001

ನವದೆಹಲಿ, ಸೆ.3-ಈಶಾನ್ಯ ರಾಜ್ಯ ಸಿಕ್ಕಿಂನ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ 73 ದಿನಗಳ ಸೇನಾ ಸಂಘರ್ಷ ಅಂತ್ಯಗೊಳಿಸಲು ಭಾರತ-ಚೀನಾ ಮಹತ್ವದ ನಿರ್ಧಾರ ಕೈಗೊಂಡ ಆರು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಪ್ರವಾಸ ಆರಂಭಿಸಿದ್ದಾರೆ.  ಸಂಪುಟ ವಿಸ್ತರಣೆ ನಂತರ ಅವರು ಚೀನಾದ ಬಂದರು ನಗರಿ ಕ್ಷಿಯಾಮೆನ್‍ನಲ್ಲಿ ನಡೆಯಲಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸಿದರು. ಮೋದಿ ಕೈಗೊಂಡ ವಿದೇಶಿ ಪ್ರವಾಸಗಳು ಫಲಪ್ರದವಾಗುತ್ತಿರುವ ಸನ್ನಿವೇಶಗಳ ನಡುವೆ ಭಾರತದ ಹಿತಶತ್ರು ಎಂದೇ ಪರಿಗಣಿಸಲಾಗಿರುವ ಚೀನಾಗೆ ತೆರಳಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ.

ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರೊಂದಿಗೆ ಕೆಲವು ಮಹತ್ವದ ವಿಷಯಗಳನ್ನು ಚರ್ಚಿಸುವ ನಿರೀಕ್ಷೆ ಇದೆ.
ಪಾಕಿಸ್ತಾನವು ಭಯೋತ್ಪಾದಕರಿಗೆ ಸ್ವರ್ಗವಾಗಿದೆ ಎಂಬ ಬಗ್ಗೆ ವಿಶ್ವದ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕಟುವಾಗಿ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ, ಏಷ್ಯಾ ಖಂಡದಲ್ಲಿಆತಂಕವಾದವನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮಕ್ಕೆ ಸಹಕಾರ ನೀಡುವಂತೆ ಚೀನಾವನ್ನು ಮೋದಿ ಒತ್ತಾಯಿಸುವ ನಿರೀಕ್ಷೆ ಇದೆ.
ಚೀನಾದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡ ನಂತರ ಮೋದಿ ಮ್ಯಾನ್ಮಾರ್‍ಗೂ ಭೇಟಿ ನೀಡಲಿದ್ದಾರೆ. ಭಾರತದ ಸಹಕಾರಕ್ಕಾಗಿ ಆ ದೇಶ ಹಾತೊರೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಪ್ರವಾಸ ಪ್ರಾಮುಖ್ಯತೆ ಪಡೆದುಕೊಂಡಿದೆ. ಎರಡು ದಿನಗಳ ಭೇಟಿ ವೇಳೆ ಅವರು ಮ್ಯಾನ್ಮಾರ್‍ನ ಉನ್ನತ ನಾಯಕರನ್ನು ಭೇಟಿ ಮಾಡುವರು.

Facebook Comments

Sri Raghav

Admin