ಯುಎಸ್ ಓಪನ್ : ಸಾನಿಯಾ- ಬೋಪಣ್ಣ ಮುಂದಿನ ಸುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Sania-01

ನ್ಯೂಯಾರ್ಕ್, ಸೆ. 3- ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಗ್ರಾಂಡ್ ಸ್ಲಾಮ್ ಓಪನ್‍ನಲ್ಲಿ ಭಾರತದ ಟೆನಿಸ್ ಮಾಂತ್ರಿಕರಾದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಅವರು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಮಹಿಳೆಯರ ಡಬಲ್ಸ್‍ನಲ್ಲಿ 2 ಗಂಟೆಗೂ ಹೆಚ್ಚು ಕಾಲ ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾದ ಸಕುಹೈ ಪೆಂಗ್ ಅವರು ಸೋವಾಕಿಯಾದ ಜನಾ ಕಿಪಿಲೋವಾ ಹಾಗೂ ಮಾಗ್‍ಡಾಲೆನಾದ ರೆಬಾರಿಕೊವಾ ಅವರ ವಿರುದ್ಧ 6-7(5), 6-3, 6-3 ಸೆಟ್‍ಗಳಿಂದ ಗೆಲ್ಲುವ ಮೂಲಕ ಮಹಿಳೆಯರ ಡಬಲ್ಸ್‍ನ 3ನೆ ಸುತ್ತಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಇಂಡೋ- ಚೀನಾ ಜೋಡಿಯು ಮುಂದಿನ ಸುತ್ತಿನಲ್ಲಿ ರೊಮೆನಿಯಾ ಹಾಗೂ ಸ್ಪಾನೀಸ್‍ನ ಸೊರಾನಾ ಕ್ರಿಸ್ಟಿಯಾ ಹಾಗೂ ಸಾರಾ ಸೋರಿಬೆಸ್ ಟ್ರೋಮಾ ವಿರುದ್ಧ ಕ್ವಾರ್ಟರ್‍ಫೈನಲ್‍ಗೆ ಪ್ರವೇಶಿಸಲು ಹೋರಾಟ ನಡೆಸಲಿದ್ದಾರೆ. ಆದರೆ ಮಿಕ್ಸ್ಟ್ ಡಬಲ್ಸ್‍ನಲ್ಲಿ ಸಾನಿಯಾ ಮಿರ್ಜಾ ಚೀನಾದ ಇವಾನ್ ಡೊಡ್‍ಹಿಗಿಯು ಲಾಟ್‍ವಿಯಾನ್ – ಫ್ರೆಂಚ್ ಜೋಡಿಯಾದ ಜೆಲೆನಾ ಹೊಸ್ಟಾಪೆನ್‍ಕೊ ಮತ್ತು ಫೆಬ್‍ರಿಕಾ ಮಾರ್ಟಿನ್ ವಿರುದ್ಧ 7-5, 3-6, 6-10 ಸೆಟ್‍ಗಳಿಂದ ಪರಾಭವಗೊಂಡು ನಿರಾಸೆ ಮೂಡಿಸಿದರು.

ಬೋಪಣ್ಣ – ದಾಬ್ರೋವೆಸ್ಕಿ ಜೋಡಿಗೆ ಜಯ:

ಫ್ರೆಂಚ್ ಓಪನ್‍ನ ಚಾಂಪಿಯನ್‍ಷಿಪ್‍ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಗ್ಯಾಬ್‍ರಿಲೆಲಾ ದಾಬ್ರೋವೆಸ್ಕಿ ಜೋಡಿಯು ಹೀಟರ್ ವಾಟ್ಸನ್ ಹಾಗೂ ಹೆನ್ರಿ ಕೊನ್‍ಟಿನೆನ್ ವಿರುದ್ಧ 6-4, 4-6, 13-11 ಸೆಟ್‍ಗಳಿಂದ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಇಂಡೋ- ಕೆನೆಡಿಯಾನ್ ಜೋಡಿಯು ಎರಡನೇ ಸುತ್ತಿನಲ್ಲಿ ಅಮೆರಿಕಾ- ಸ್ಪೆನೀಸ್ ಜೋಡಿಯಾದ ನಿಕೋಲಾಸ್ ಮೊನ್‍ರೋ ಮತ್ತು ಮರಿಯಾ ಜೋಸ್ ಜೋಡಿಯ ವಿರುದ್ಧ ಸೆಣಸಲಿದೆ.

Facebook Comments

Sri Raghav

Admin