ರೈಲ್ವೆ ಸಚಿವಾಲಯಕ್ಕೆ ಸುರೇಶ್ ಪ್ರಭು ಗುಡ್‍ಬೈ

ಈ ಸುದ್ದಿಯನ್ನು ಶೇರ್ ಮಾಡಿ

Suresh-Prabhu--01

ನವದೆಹಲಿ, ಸೆ.3-ದೇಶದ ವಿವಿಧೆಡೆ ಕಳೆದ ತಿಂಗಳೊಂದರಲ್ಲೇ ರೈಲು ಹಳಿ ತಪ್ಪಿದ ನಾಲ್ಕು ಘಟನೆಗಳು ಮತ್ತು ಸಾವು-ನೋವುಗಳಿಗೆ ವಿಚಲಿತರಾಗಿ ರಾಜೀನಾಮೆಗೆ ಮುಂದಾಗಿದ್ದ ರೇಲ್ವೆ ಸಚಿವ ಸುರೇಶ್ ಪ್ರಭು ಕೊನೆಗೂ ಸಚಿವಾಲಯಕ್ಕೆ ಗುಡ್‍ಬೈ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಗೆ ಸಹಕಾರ ನೀಡಿದ ಇಲಾಖೆಯ ಉನ್ನತಾಧಿಕಾರಿಗಳು ಮತ್ತು 13 ಲಕ್ಷ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರೈಲ್ವೆ ಇಲಾಖೆಗೆ ಸುರೇಶ್ ಪ್ರಭು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಭೂಸಾರಿಗೆ ಸಚಿವ ನಿತೀನ್ ಗಡ್ಕರಿಗೆ ಆ ಸಚಿವಾಲಯದ ನಿರ್ವಹಣೆ ಹೊಣೆ ನೀಡುವ ಸಾಧ್ಯತೆ ಇದೆ. ಸುರೇಶ್ ಪ್ರಭು ಅವರಿಗೆ ಪರಿಸರ ಖಾತೆ ನೀಡುವ ನಿರೀಕ್ಷೆ ಇದೆ.

Facebook Comments

Sri Raghav

Admin