ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ,ಕೊಹ್ಲಿ ಸೂಪರ್ ಸೆಂಚುರಿ, ಲಂಕಾ ಕ್ಲೀನ್ ಸ್ವೀಪ್

ಈ ಸುದ್ದಿಯನ್ನು ಶೇರ್ ಮಾಡಿ

Kohli--01

ಕೊಲಂಬೊ. ಸೆ.03 : ಲಂಕಾ ಏಕದಿನಸರಣಿಯಲ್ಲಿ ಕೊನೆಯಪಂದ್ಯದಲ್ಲಿ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಭಾರತದ ಭರವಸೆಯ ಬೌಲರ್ ಭುವನೇಶ್ವರ್ ಕುಮಾರ್ ದಾಳಿಗೆ ತತ್ತರಿಸಿ 49.4 ಓವರ್ ನಲ್ಲಿ ಕೇವಲ 238ರನ್ ಗಳಿಸಿ ಸರ್ವಪತನಕ ಕಂಡಿತು. ಲಂಕಾ ಪರವಾಗಿ ತಿರಿಮನೆ 67, ಏಂಜೆಲೊ ಮ್ಯಾಥ್ಯೂಸ್ 55, ತರಂಗಾ 48 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಯಾರೂ ಹೇಳಿಕೊಳ್ಳುವಂತ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ.

Bhuvaneshwar

ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿ ನಂತರ ಮಧ್ಯಮ ಕ್ರಮಾಂಕದಲ್ಲಿ ಚೇತರಿಸಿಕೊಂಡರೂ ಕೊನೆ ಕ್ಷಣದಲ್ಲಿ ಮತ್ತೆ ಲಂಕಾ ದಾಂಡಿಗರು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು. ಭಾರತದ ಪರ ಭುವನೇಶ್ವರ್ ಕುಮಾರ್ 5, ಜಸ್ಪ್ರೀತ್ ಬೂಮ್ರಾ 2, ಕುಲದೀಪ್ ಯಾದವ್ 1, ಯಜುವೇಂದ್ರ ಚಾಹಲ್ 1 ವಿಕೆಟ್ ಪಡೆದು ಮಿಂಚಿದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡು ಮುಗ್ಗರಿಸಿತಾದರೂ ನಾಯಕ ಕೊಹ್ಲಿಯ ಭರವಸೆಯ ಆಟದಿಂದ ಪಂದ್ಯವನ್ನು ನಿರಾಯಾಸಗಾಗಿ ಗೆಲ್ಲಲು ಸಾಧ್ಯವಾಯಿತು. ಆರಂಭಿಕರಾಗಿ ಬ್ಯಾಂಟಿಂಗ್ ಗೆ ಇಳಿದ ರೋಹಿತ್ ಶರ್ಮ (16)- ರಹಾನೆ(05) ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು, ನಂತರ ಬಂದ ನಾಯಕ ಕೊಹ್ಲಿ ನಾಯಕನ ಆಟವಾಡಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಉಳಿದಂತ ಧೋನಿ 36, ಕೇದಾರ್ ಜಾದವ್ 63 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಲಂಕಾವನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಭಾರತ ಯಶಸ್ವಿಯಾಯಿತು.  ತವರಿನಲ್ಲಿಯೇ ಶ್ರೀಲಂಕಾ ತೀವ್ರ ಮುಖಭಂಗ ಅನುಭವಿಸಿದೆ.

ಸ್ಕೋರ್ :

SL : 238 (49.4 Ovs)
IND : 239/4 (46.3 Ovs)

 

Facebook Comments

Sri Raghav

Admin