ಅಂಬಾಲ ಜೈಲಿನಲ್ಲಿ ರೇಪಿಸ್ಟ್ ರಾಮ್‍ರಹೀಂ ಅನುಯಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim-Singh-Jail

ಚಂಡೀಗಢ,ಸೆ.4-ಇಬ್ಬರು ಸಾಧ್ವಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಜೈಲು ಪಾಲಾಗಿರುವ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್‍ನ ಅನುಯಾಯಿವೊಬ್ಬ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಂಬಾಲ ಸೆಂಟ್ರಲ್ ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರಪ್ರದೇಶದ ಸರಸ್ವ ನಿವಾಸಿ ರವೀಂದರ್ ಎಂಬಾತ ರಾಮ ರಹೀಮ್ ಬಂಧನದ ನಂತರ ಪಂಚಕುಲದಲ್ಲಿ ಹಿಂಸಾಚಾರದ ವೇಳೆ ಈತನನ್ನು ಬಂಧಿಸಲಾಗಿತ್ತು. ರವೀಂದರ್ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin