ಗೋರಖ್‍ಪುರದ ಬಿಆರ್‍ಡಿ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ ಮತ್ತೆ 9 ಶಿಶುಗಳ ಮರಣ

ಈ ಸುದ್ದಿಯನ್ನು ಶೇರ್ ಮಾಡಿ

BRD-Hospital--01

ಗೋರಖ್‍ಪುರ್, ಸೆ.4-ಉತ್ತರಪ್ರದೇಶದ ಸರ್ಕಾರಿ ಒಡೆತನದ ಬಿಆರ್‍ಡಿ ಆಸ್ಪತ್ರೆ ಶಿಶುಗಳಿಗೆ ಮೃತ್ಯು ತಾಣವಾಗಿದೆ. 24 ತಾಸುಗಳಲ್ಲಿ ಮತ್ತೆ 9 ಮಕ್ಕಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 313ಕ್ಕೇರಿದೆ. ಶಿಶು ಮರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕೆಲವರನ್ನು ಬಂಧಿಸಿ ತನಿಖೆ ನಡೆಯುತ್ತಿದ್ದರೂ, ಸಾವಿನ ಸರಣಿ ಮುಂದುವರಿದಿದೆ. ಮಕ್ಕಳ ಜೀವ ರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಟ್ಟಪ್ಪಣೆ ಮಾಡಿದ್ದರೂ ಮತ್ತೆ 9 ಮಕ್ಕಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿವೆ.   ಕಳೆದ ತಿಂಗಳಿನಿಂದ ಬಿಆರ್‍ಡಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ದಿನನಿತ್ಯದ ಸುದ್ದಿಗಳಾಗುತ್ತಿವೆ.

Facebook Comments

Sri Raghav

Admin