ಡೆಡ್ಲಿ ಬ್ಲೂವೇಲ್‍ಗೆ ಮಧ್ಯಪ್ರದೇಶದ ವಿದ್ಯಾರ್ಥಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Blue-whale

ದಮೋಹ್, ಸೆ.4-ಅತ್ಯಂತ ಅಪಾಯಕಾರಿ ಬ್ಲೂವೇಲ್ ಆನ್‍ಲೈನ್ ಗೇಮ್‍ನಿಂದ ನರಬಲಿ ಮುಂದುವರಿದಿದೆ. ಎಲ್ಲ ರಾಜ್ಯಗಳಲ್ಲೂ ಮಕ್ಕಳು ಮತ್ತು ಯುವಕರನ್ನೂ ಆಪೋಶನ ತೆಗೆದುಕೊಳ್ಳುತ್ತಿರುವ ನೀಲಿ ತಿಮಿಂಗಲ ಮಧ್ಯಪ್ರದೇಶದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕೊಂದಿದೆ.
ಆತ್ಯಹತ್ಯೆಗೆ ಪ್ರಚೋದನೆ ನೀಡುವ ಈ ಗೇಮ್‍ನಿಂದಾಗಿ ಪುಟೇರಾದ ಸಾತ್ವಿಕ್ ಪಾಂಡೆ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಸಾವಿಗೆ ಶರಣಗಾಗಿರುವ ಘಟನೆ ದಮೋಹ್‍ನಲ್ಲಿ ನಡೆದಿದೆ.

ತನ್ನ ಬೈಕ್‍ನನ್ನು ರೈಲ್ವೆ ಕ್ರಾಸಿಂಗ್ ಬಳಿ ಪಾರ್ಕ್ ಮಾಡಿ, ತನ್ನ ಮೊಬೈಲ್‍ನಲ್ಲಿ ಸೆಲ್ಫೀ ತೆಗೆದುಕೊಂಡು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬ್ಲೂವೇಲ್ ಗೇಮ್ ವ್ಯಸನಿಯಾಗಿದ್ದು, ತಮ್ಮನ್ನು ಸಹ ಇದರಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದ ಎಂದು ಸಹಪಾಠಿಗಳು ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin