ನದಿ ಜೋಡಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda-2

ಚಳ್ಳಕೆರೆ, ಸೆ.4-ನದಿ ಜೋಡಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ, ಮುತ್ತುರಾಜ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸರಳ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನದಿ ಜೋಡಣೆ ಬಗ್ಗೆ ಹೇಳಿಕೆ ನೀಡುವಾಗ ಅದಕ್ಕಿರುವ ಅಡ್ಡಿ ಆತಂಕಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ದೇಶದ ಎಲ್ಲ ರಾಜ್ಯಗಳು ನದಿ ಜೋಡಣೆಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ನದಿ ಜೋಡಣೆ ಆಗಬಹುದು ಎಂದು ಅಭಿಪ್ರಾಯಪಟ್ಟರು.

ರೈತರ ವರಮಾನ ಹೆಚ್ಚಿಸಬೇಕು ಅದಕ್ಕಾಗಿ ಇಸ್ರೇಲï ತಂತ್ರಜ್ಞಾನ ಬಳಸಿಕೊಂಡು ರೈತರಿಗೆ ಏನು ಮಾಡಲು ಸಾಧ್ಯ ಎನ್ನುವ ಬಗ್ಗೆ ಅಧ್ಯಯನ ಮಾಡಲು ಕುಮಾರಸ್ವಾಮಿ ಇಸ್ರೇಲ್‍ಗೆ ಹೋಗಿ ಬಂದಿದ್ದಾರೆ. ಅವರು ಸಿಎಂ ಆದ ನಂತರ ಅಲ್ಲಿನ ತಾಂತ್ರಿಕತೆ ಬಳಸಿಕೊಂಡು ಅನುಷ್ಠಾನ ಮಾಡುವ ಉದ್ದೇಶ ಅವರಲ್ಲಿದೆ ಎಂದರು. ರಾಜ್ಯ ಸರ್ಕಾರ ರೈತರ ಪರವಾಗಿಲ್ಲ ರೈತರ ತೋಟಗಳಿಗೆ ಆಗಿರುವ ಹಾನಿ ಕುರಿತು ಅಧ್ಯಯನ ಮಾಡಿಸಿ ವರದಿ ತಯಾರಿಸಲು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ ಆದರೆ, ಮುಖ್ಯಮಂತ್ರಿಗಳು ಇದುವರೆಗೂ ಯಾವುದೇ ಸ್ಪಂದನೆ ನೀಡಿಲ್ಲ ಎಂದರು.

ಮಾಜಿ ಸಚಿವ ಎಚ್.ವಿಶ್ವನಾಥ್ ದಶಕಗಳ ಕಾಂಗ್ರೆಸ್‍ನಲ್ಲೇ ದುಡಿದಿದ್ದಾರೆ ಆದರೆ ಅವರನ್ನೇ ಹೊರಹಾಕಿದ್ದರು ಅವರನ್ನು ನಾನು ಕೈ ಹಿಡಿದು ಜೆಡಿಎಸ್‍ಗೆ ಕರೆತಂದಿದ್ದೇನೆ,ವಿಶ್ವ ವಿಶ್ವನಾಥ್ ಅವರನ್ನು ಹುಣಸೂರಿನಿಂದ ಗೆಲ್ಲಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡ ಘೋಷಿಸಿದರು. ಎಚ್.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಬೇಕಾದರೂ ಚುನಾವಣೆ ಬರಬಹುದು, ರಾಜ್ಯದ ಹಿತದೃಷ್ಟಿಯಿಂದ ನಾನು ಕುಮಾರ ಪಥದಲ್ಲಿ ಸಾಗುತ್ತಿದ್ದೇನೆ. ಕುಮಾರ ಪಥ ನಾಡಿನ ಜನರ ಏಳ್ಗೆಗೆ ದಾರಿ ಯಾಗಬೇಕು ಅದಕ್ಕೆ ಮತದಾರರೇ ಶಕ್ತಿ ನೀಡಬೇಕು ಮುಂದಿನ ಚುನಾವಣೆಯಲ್ಲಿ ಜೆಡಿಎಸï ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಇದೇ ವೇಳೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ನವ ಜೋಡಿಗಳಿಗೆ ವಿವಾಹ ನೆರವೇರಿಸಲಾಯಿತು. ಪಾವಗಡ ಶಾಸಕ ತಿಮ್ಮರಾಯಪ್ಪ,ಶಾಸಕ ಸುರೇಶ್ ಬಾಬು,ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು,ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ, ನಗರಸಭೆ ಸದಸ್ಯ ಕಾಂತರಾಜ್ ,ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ಟಿ. ತಿಪ್ಪೇಸ್ವಾಮಿ ತಾಲ್ಲೂಕು ಪಂಚಾಯಿತಿ ಸದಸ್ಯ, ಸಮರ್ಥರಾಯ್ ನಗರಸಭೆ ಸದಸ್ಯ ವಿಜಯಕುಮಾರ್ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.

Facebook Comments

Sri Raghav

Admin