ನನ್ನ ಪತಿ ಇನ್ನೂ ಸಿಯಾಚಿನ್‍ನಲ್ಲಿ ದೇಶ ಕಾಯುತ್ತಿದ್ದಾರೆ : ಹುತಾತ್ಮ ಹನುಮಂತಪ್ಪ ಪತ್ನಿ

ಈ ಸುದ್ದಿಯನ್ನು ಶೇರ್ ಮಾಡಿ

Hanumantappan--01

ಯಲಹಂಕ, ಸೆ.4- ನಗರ ಹುಣಸಮಾರನಹಳ್ಳಿಯಲ್ಲಿ ಅಕ್ಷಯ ಕ್ರೆಡಿಟ್ ಸೌಹಾದರ್ ಸಹಕಾರಿ ನಿಯಮಿತ 7ನೇ ವಾರ್ಷಿಕ ಸಭೆಯಲ್ಲಿ ಸಿಯಾಚಿನ್ ವೀರ ಯೋಧ ಹನುಮಂತಪ್ಪ ಕೊಪ್ಪದರವರ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪತ್ನಿ ಮಹದೇವಿಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ವೇಳೆ ಮಹದೇವಿ ಹನುಮಂತಪ್ಪ ಮಾತನಾಡಿ, ನನ್ನ ಪತಿ ಇನ್ನೂ ಸಿಯಾಚಿನ್ ಗಡಿಯಲ್ಲಿ ದೇಶವನ್ನು ಕಾಯುತ್ತಿದ್ದಾರೆ. ನಾನೇಕೆ ಅವರು ಮೃತಪಟ್ಟಿದ್ದಾರೆ ಎಂದು ದುಖಿಸಲಿ. ಅವರು ಸೈನ್ಯದಲ್ಲಿ ಇದ್ದಾಗಲೂ ವರ್ಷದಲ್ಲಿ ಹಾಗೊಮ್ಮೆ ಹೀಗೊಮ್ಮೆ ಸಿಗುತ್ತಿದ್ದರು. ಇನ್ನು ದೂರವಾಣಿ ಸಂಪರ್ಕ ಸಹ ಸಾಧ್ಯವಾಗುತ್ತಿರಲಿಲ್ಲ. ಅದಾಗಿ ಅವರನ್ನು ನೋಡುವ ಭಾಗ್ಯ ನಮಗೆ ಕೇವಲ 1-2 ಬಾರಿ ಮಾತ್ರ ದೊರೆಯುತ್ತಿತ್ತು. ಆದ್ದರಿಂದ ನನ್ನ ಅಂತರಾತ್ಮದ ವೀರ ಯೋಧ ಹನುಮಂತಪ್ಪ ಕೊಪ್ಪದ ಇನ್ನೂ ದೇಶಕ್ಕಾಗಿ ಗಡಿಯಲ್ಲೆ ಇದ್ದಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಅವರು ಬದುಕಿದ್ದಾಗ ನನಗೆ ಅರಿವಾಗಿರಲಿಲ್ಲ ದೇಶ ಸೇವೆಯಲ್ಲಿ ಈ ರೀತಿಯ ಸುಖ ನೆಮ್ಮದಿ ಇರುತ್ತದೆಂದು ಆದರೆ ಅವರ ಕಾಲವಾದ ನಂತರದಲ್ಲಿ ಅರಿವಾಗಿದೆ. ದೇಶಕ್ಕಾಗಿ ಪ್ರಾಣ ಕೊಡುವುದರಲ್ಲಿ ಸಾರ್ಥಕತೆ ಇದೆ. ಹಾಗಾಗಿ ನಮ್ಮ ಮಗಳನ್ನೂ ದೇಶಸೇವೆಗೆ ಹಣಿ ಮಾಡುತ್ತಿದ್ದೇನೆ. ಇಡೀ ದೇಶ ನನ್ನ ಮನೆ ನನ್ನ ಮನೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನು ವುದಕ್ಕಿಂತ ನನ್ನ ಹೊಣೆ ಎಂದು ಎಲ್ಲರೂ ಭಾವಿಸಿದರೆ ದೇಶಕ್ಕೆ ಅದೇ ನಾವು ಸಲ್ಲಿಸುವ ಗೌರವ ಎಂದು ಧುಖಃತ್ಪಪ್ತರಾದರು.

ತೆಲುಗು ಚಿತ್ರ ನಟಿ ಮೌರ್ಯಾನಿ ಮಾತನಾಡಿ, ಕೊರೆವ ಹಿಮದ ಮಧ್ಯೆ ಸುಮಾರು 25 ಅಡಿ ಹಾಳದಲ್ಲಿ ಸುಮಾರು 10 ದಿನಗಳ ಕಾಲ ಸಾವಿನ ಜೊತೆ ಹೋರಾಟ ಮಾಡಿದ ಆ ದೃಶ್ಯ ಎಲ್ಲರ ಮೈ ನವಿರೇಳಿಸುವಂತಹದ್ದು, ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರು ಇನ್ನೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಆತ್ಮಸ್ಥೈರ್ಯದಿಂದ ಉಸಿರು ಬಿಗಿ ಹಿಡಿದು ಮಾಡಿದ ಹೋರಾಟ ಯಾವ ಕಾರ್ಗಿಲ್ ಯುದ್ದಕ್ಕಿಂತ ಕಮ್ಮಿ ಇಲ್ಲ, ಇದರಿಂದ ಕನ್ನಡಿಗರ ಧೈರ್ಯ-ಆತ್ಮವಿಶ್ವಾಸ-ಶಕ್ತಿಯ ಬಗ್ಗೆ ಜಗತ್ತು ನಿಬ್ಬೆರಗಾಗಿ ನೋಡುವಂತಾಗಿತ್ತು ಆದರೆ ವಿಧಿಯಾಟದ ಮುಂದೆ ಮಂಡಿಯೂರಿ ದೇಶಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿದ ಕನ್ನಡಿಗನಿಂದಾಗಿ ನೆರೆಯ ದೇಶದಲ್ಲೂ ಶೂಟಿಂಗ್ ವೇಳೆ ನನ್ನ ಬಳಿ ಬಂದು ಕರುನಾಡಿನ ಮಗಳಾದ ನನ್ನನ್ನೂ ಗೌರವಿಸುತ್ತಿದ್ದ ಕ್ಷಣ ನನಗೆ ಕನ್ನಡತಿಯಾಗಿ ಹುಟ್ಟಿದ ಹಾಗೂ ಇಂತಹ ಮಹಾನ್ ಚೇತನಗಳ ಬಗ್ಗೆ ನೆನೆದು ಕಣ್ಣೀರು ಬರಲಾರಂಭಿಸಿತು ಎಂದು ಭಾವುಕರಾದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಉಪ ಬವ್ಯವಸ್ಥಾಪಕ ಸೂರ್ಯಕಾಂತ್ ಕಾಳೆ, ಮಧುಕರ್ ಜಿ ಹೆಗ್ಗಡೆ, ಅಧ್ಯಕ್ಷ ಪುಟ್ಟಶಾಮಪ್ಪ, ಸಿಇಒ ವೆಂಕಟಾಚಲಪತಿ ಉಪಸ್ಥತಿತರಿದ್ದರು.

Facebook Comments

Sri Raghav

Admin