ಪಾಕ್ ವಿರುದ್ಧ ಮೋದಿಗೆ ಸಿಕ್ತು ಮತ್ತೊಂದು ರಾಜತಾಂತ್ರಿಕ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Modi012

ಕ್ಸಿಯಾಮೆನ್(ಚೀನಾ), ಸೆ.4-ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಉಗ್ರರಿಗೆ ಆಶ್ರಯ ನೀಡುತ್ತಿರುವ ಟೆರ್ರರಿಸ್ಟ್ ಹೆವೆನ್ ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ರಾಜತಾಂತ್ರಿಕ ಗೆಲುವು ಲಭಿಸಿದೆ.  ಈಗಾಗಲೇ ಪಾಕ್ ಕೃಪಾಪೋಷಿತ ಭಯೋತ್ಪಾದಕರ ವಿರುದ್ಧ ಅಮೆರಿಕ ಮತ್ತು ವಿಶ್ವಸಂಸ್ಥೆಯ ಬೆಂಬಲ ಗಳಿಸಿರುವ ಮೋದಿ, ಈಗ ಬ್ರಿಕ್ಸ್ ದೇಶಗಳ ಸಹಕಾರವನ್ನೂ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಮಿಗಿಲಾಗಿ ಚೀನಾ ಇದೇ ಮೊಟ್ಟಮೊದಲ ಬಾರಿಗೆ ಪಾಕಿಸ್ತಾನದ ಉಗ್ರರ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಬಹಿರಂಗ ಬೆಂಬಲ ಪ್ರಕಟಿಸಿದೆ.

Modi 004

ಚೀನಾದ ಕ್ಸಿಯಾಮೆನ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ದೇಶಗಳ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ) 9ನೇ ಶೃಂಗಸಭೆಯಲ್ಲಿ ಅಲ್-ಖೈದಾ, ತಾಲಿಬಾನ್, ಇಸ್ಲಾಮಿಕ್ ಸ್ಟೇಟ್, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‍ಇಟಿ) ಮತ್ತು ಜೈಷ್-ಎ-ಮೊಹಮದ್ (ಜೆಇಎಂ) ಭಯೋತ್ಪಾದನೆ ಸಂಘಟನೆಗಳು ನಡೆಸುತ್ತಿರುವ ಹಿಂಸಾಚಾರ ಹಾಗೂ ಇವುಗಳಿಂದ ಎದುರಾಗಿರುವ ಆತಂಕದ ಬಗ್ಗೆ ಸಭೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಲಾಯಿತು.

gsdgasdfgh

ಇವುಗಳನ್ನು ನಿಗ್ರಹಿಸುವ ನಿರ್ಣಯ ಕೈಗೊಂಡ ಬ್ರಿಕ್ಸ್ ರಾಷ್ಟ್ರಗಳು, ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತು ವಿಶ್ವಸಂಸ್ಥೆಯ ಸಮಗ್ರ ಸಮಾವೇಶದ ಗೊತ್ತುವಳಿಗಳ ತ್ವರಿತ ಅನುಷ್ಠಾನಕ್ಕೆ ಕರೆ ನೀಡಿದವು. ಭಯೋತ್ಪಾದನೆ, ಉಗ್ರವಾದ ಹಾಗೂ ಉಗ್ರರಿಗೆ ಆರ್ಥಿಕ ನೆರವು ವಿರುದ್ಧ ಹೋರಾಡಲು ಅಳವಡಿಸಿಕೊಳ್ಳಲು ವಿಶ್ವದ ನಾನಾ ರಾಷ್ಟ್ರಗಳಿಗೆ ಬ್ರಿಕ್ಸ್ ಶೃಂಗಸಭೆ ಒಕ್ಕೊರಲಿನ ಕರೆ ನೀಡಿದೆ.  ಮೋದಿ-ಪುಟಿನ್ ಚರ್ಚೆ: ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಹಕಾರಗಳ ಕುರಿತು ಸಮಾಲೋಚನೆ ನಡೆಸಿದರು.

Facebook Comments

Sri Raghav

Admin