ಫಾರೂಕಾಬಾದ್‍ ನಲ್ಲಿ ಆಕ್ಸಿಜನ್ ಕೊರತೆಯಿಂದ 49 ಕಂದಮ್ಮಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

UP-01

ಫಾರೂಕಾಬಾದ್, ಸೆ.4-ಉತ್ತರಪ್ರದೇಶದಲ್ಲಿ ಮಕ್ಕಳ ಸಾವಿನ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಲೇ ಇವೆ. ಫಾರೂಕಾಬಾದ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಒಂದು ತಿಂಗಳ ಅವಧಿಯಲ್ಲಿ 49 ಮಕ್ಕಳು ಮೃತಪಟ್ಟಿದ್ದಾರೆ. ಗೋರಖ್‍ಪುರ್‍ನಲ್ಲಿ ಆಮ್ಲಜನಕ ಆಭಾವದಿಂದ 63 ಕಂದಮ್ಮಗಳು ಬಲಿಯಾಗಿದ್ದವು.

ಫಾರೂಕಾಬಾದ್ ಜಿಲ್ಲಾ ದಂಡಾಧಿಕಾರಿಯವರು ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಂಬಂಧಪಟ್ಟ ವೈದ್ಯರು ನಿರ್ಲಕ್ಷ್ಯದ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಗೋರಖ್‍ಪುರ್‍ನ ಬಿಆರ್‍ಡಿ ಆಸ್ಪತ್ರೆಯಲ್ಲಿ ದುರಂತ ಸಂಭವಿಸಿದ ಸಮಯದಲ್ಲೇ ಫಾರೂಕಾಬಾದ್ ಸರ್ಕಾರಿಯಲ್ಲಿಯೂ ಅದೇ ರೀತಿಯ ಘಟನೆ ಮರುಕಳಿಸಿದೆ. ಶಿಶುಗಳ ಚಿಕಿತ್ಸಾ ವಾರ್ಡ್‍ನಲ್ಲಿ ಆಕ್ಸಿಜನ್ ಕೊರತೆಯಿಂದ ಈ ಸಾವುಗಳು ಸಂಭವಿಸಿವೆ.  ಈ ಘಟನೆಗಳಿಂದ ಪೋಷಕರು ಸರ್ಕಾರಿ ಆಸ್ಪತ್ರೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದು, ಸಾರ್ವಜನಿಕರು ವೈದ್ಯರು ಮತ್ತು ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Facebook Comments

Sri Raghav

Admin