ಭಯೋತ್ಪಾದನೆ ಮನುಕುಲದ ದೊಡ್ಡ ಶತ್ರು : ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

Venkaiah-Naidu

ಹೈದರಾಬಾದ್, ಸೆ.4-ಭಯೋತ್ಪಾದನೆ ಮನುಕುಲದ ದೊಡ್ಡ ಶತ್ರು ಎಂದು ಬಣ್ಣಿಸಿರುವ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಈ ಪಿಡುಗನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಭಾರತ ಅವಿರತ ಹೋರಾಟ ಮುಂದುವರಿಸಿದೆ ಎಂದು ಹೇಳಿದ್ದಾರೆ.  ಭಯೋತ್ಪಾದನೆಗೆ ಯಾವುದೇ ಧರ್ಮ, ವರ್ಣ ಅಥವಾ ಲಿಂಗವಿಲ್ಲ ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯೊಂದಿಗೆ ಧರ್ಮವನ್ನು ಬೆರೆಸಲು ಯತ್ನಿಸುತ್ತಿರುವುದು ದುರದೃಷ್ಟ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಶಮೀರ್‍ಪೇಟ್‍ನಲ್ಲಿ ನಿನ್ನೆ ರಾತ್ರಿ ನಡೆದ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಯ 78ನೇ ಅಧಿವೇಶನದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಎಂಬ ಪೆಡಂಭೂತವನ್ನು ಹತ್ತಿಕ್ಕಲು ಅಂತಾರಾಷ್ಟ್ರೀಯ ಸಮುದಾಯ ಅದರಲ್ಲೂ ಕಾನೂನು ತಜ್ಞರು, ನ್ಯಾಯವಾದಿಗಳು ಮತ್ತು ಪರಿಣಿತರು ಕಟ್ಟುನಿಟ್ಟಿನ ಕಾನೂನನ್ನು ರೂಪಿಸಬೇಕು ಎಂದು ಕರೆ ನೀಡಿದರು.  ಭಯೋತ್ಪಾದಕರನ್ನು ಸದೆಬಡಿಯಲು ಮತ್ತು ಉಗ್ರವಾದದ ಎಲ್ಲ ಸ್ವರೂಪಗಳನ್ನು ಮಟ್ಟ ಹಾಕಲು ವಿಶಾಲ ತಳಹದಿಯ ಮೇಲೆ ಅಂತಾರಾಷ್ಟ್ರೀಯ ಒಪ್ಪಂದ ಏರ್ಪಡುವ ಅಗತ್ಯವೂ ಇದೆ ಎಂದು ಉಪ ರಾಷ್ಟ್ರಪತಿ ಪ್ರತಿಪಾದಿಸಿದರು.

Facebook Comments

Sri Raghav

Admin