ಮೇಯರ್ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಮತ ಚಲಾಯಿಸುತ್ತೇನೆ : ಆರ್.ಬಿ.ತಿಮ್ಮಾಪುರ್

ಈ ಸುದ್ದಿಯನ್ನು ಶೇರ್ ಮಾಡಿ

R.B.Timmapura

ಬೆಂಗಳೂರು, ಸೆ.4-ಮುಂದಿನ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಅವಕಾಶ ದೊರೆತರೆ ಮತ ಚಲಾಯಿಸುವುದಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಳಾಸ ಬದಲಾವಣೆಗೆ ಈಗಾಗಲೇ ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿದೆ. ಎರಡು ವಿಳಾಸದಲ್ಲಿ ಟಿಎಡಿಎ ಪಡೆದ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ನಾವು ಯಾವುದೇ ತಪ್ಪು ಮಾಡಿಲ್ಲ . ಒಂದು ವೇಳೆ ನಮಗೆ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಮತದಾನ ಮಾಡುತ್ತೇನೆ ಎಂದರು. ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದ್ದು, ಮುಖ್ಯಮಂತ್ರಿಗಳ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿಕೊಂಡು ಹೋಗುವ ಮೂಲಕ ಜನರ ಸೇವೆಗೆ ಅಣಿಯಾಗುವುದಾಗಿ ಹೇಳಿದರು.

Facebook Comments

Sri Raghav

Admin