ಶರಪೋವಾಗೆ ಸೋಲಿನ ಆಘಾತ

ಈ ಸುದ್ದಿಯನ್ನು ಶೇರ್ ಮಾಡಿ

Maria-Sharapova

ನ್ಯೂಯಾರ್ಕ್,ಸೆ.4-ರಷ್ಯಾದ ಸ್ಟಾರ್ ಆಟಗಾರ್ತಿ ಮಾರಿಯ ಶರಪೋವಾ, ಇಲ್ಲಿ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನಲ್ಲಿ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.  ಲಾತಿವಿಯಾದ ಸಿವೋಸ್ಟವ ವಿರುದ್ಧ 5-7 , 6-4, 6-2 ಅಂತರದಿಂದ ಸೋಲು ಅನುಭವಿಸಿ ಕ್ವಾಟರ್ ಪೈನಲ್ ತಲುಪಲು ವಿಫಲರಾದರು. 15 ತಿಂಗಳ ಬಳಿಕಡೊಪಿಂಗ್ ಪ್ರಕರಣದಿಂದ ಹೊರಬಂದ ರಷ್ಯಾ ಆಟಗಾರ್ತಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಆದರೆ ಸ್ಥಳೀಯ ಆಟಗಾರ್ತಿಯ ಆಕ್ರಮಣಕಾರಿ ಆಟಕ್ಕೆ ತತ್ತರಿಸಿದರು.

ಚುರುಕಿನ ಆಟವಾಡಿದ ಶರಪೋವಾ ಮೊದಲ ಸೆಟ್‍ನಲ್ಲಿ ಗೆಲುವು ಸಾಧಿಸಿ ಮುನ್ನಡೆ ಸಾಧಿಸಿದರು. 2ನೇ ಸೆಟ್‍ನಲ್ಲಿ ಎದುರಾಳಿಯ ಬಲಿಷ್ಟ ಸರ್ವ್, ಅಕ್ರಮಣ ಆಟಕ್ಕೆ 6-4 ಅಂತರದಲ್ಲಿ ಸೋಲು ಅನುಭವಿಸಿದರು.  ಸಮಬಲ ಸಾಧಿಸಿದ ಉಭಯ ಆಟಗಾರ್ತಿಯರು 3ನೇ ಸೆಟ್‍ನಲ್ಲಿ ರೋಚಕತೆ ಆಟ ಪ್ರದರ್ಶಿಸಿದರೂ ಅಂತಿಮವಾಗಿ ಶರಪೋವಾ 6-2 ಅಂತರದಿಂದ ಸೋಲು ಅನುಭವಿಸಿದರು.

Facebook Comments

Sri Raghav

Admin