ಹಜ್ ಯಾತ್ರೆ ಪೂರೈಸಿದ 23.52 ಲಕ್ಷ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Mecca--01

ಮಿನಾ, ಸೆ. 4-ಈ ವರ್ಷ ಒಟ್ಟು 23,52,122 ಶ್ರದ್ಧಾಳುಗಳು ಪವಿತ್ರ ಹಜ್ ಯಾತ್ರೆಯನ್ನು ನಿರ್ವಹಿಸಿದ್ದಾರೆ ಎಂದು ಸೌದಿ ಅರೇಬಿಯಾದ ಸಾಂಖ್ಯಿಕ ಮಹಾ ಪ್ರಾಕಾರ ತಿಳಿಸಿದೆ. ಭಾರತವೂ ಸೇರಿದಂತೆ ವಿವಿಧ ದೇಶಗಳಿಂದ 17,52,024 ಮಂದಿ ಹಾಗೂ ಸೌದಿ ಅರೇಬಿಯಾದಿಂದ 6,00,108 ಮಂದಿ ಹಜ್ ಯಾತ್ರೆ ನಡೆಸಿದ್ದಾರೆ ಎಂದು ಪ್ರಾಕಾರ ಮಾಹಿತಿ ನೀಡಿದೆ.

Mecca--01

ಹಜ್ ಯಾತ್ರಿಕರ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ವಿದೇಶಿ ಯಾತ್ರಿಕರಲ್ಲಿ 16,48,332 ಮಂದಿ ವಾಯು ಮಾರ್ಗವಾಗಿ, 88,855 ಜನರು ಹಡಗುಗಳಲ್ಲಿ ಆಗಮಿಸಿದ್ದರು. ಹಜ್ ಯಾತ್ರಿಕರನ್ನು ನಿಯಂತ್ರಿಸಲು ವ್ಯವಸ್ಥೆಯನ್ನು ಈ ವರ್ಷ ಮತ್ತಷ್ಟು ಬಲಗೊಳಿಸಲಾ ಗಿದ್ದು, ಮೆಕ್ಕಾ, ಮಿನಾ ಮತ್ತು ಅಕ್ಕಪಕ್ಕದ ಸ್ಥಳಗಳಲ್ಲಿ ಮೂರು ಲಕ್ಷ ಮಂದಿ ಭದ್ರತಾ ಯೋಧರನ್ನು ನಿಯೋಜಿಸಲಾಗಿತ್ತು.

Facebook Comments

Sri Raghav

Admin