ಹೈಡ್ರೋಜನ್ ಬಾಂಬ್ ಆತಂಕದ ನೆರಳಿನಲ್ಲಿ ಬಿಕ್ಸ್ ಆರಂಭ, ಶಾಂತಿಮಂತ್ರ ಪಠಿಸಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Brics--01

ಕ್ಸಿಯಾಮೆನ್(ಚೀನಾ), ಸೆ.4-ಭಯೋತ್ಪಾದನೆ ನಿಗ್ರಹ ನಮ್ಮ ಮುಖ್ಯ ಕಾರ್ಯಸೂಚಿಯಾಗಿದೆ. ಜಾಗತಿಕ ಶಾಂತಿಗಾಗಿ ಅಂತಾರಾಷ್ಟ್ರೀಯ ಸಹಕಾರ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.  ಉತ್ತರ ಕೊರಿಯಾ ಪ್ರಯೋಗಿಸಿದ ವಿನಾಶಕಾರಿ ಹೈಡ್ರೋಜನ್ ಬಾಂಬ್ ಆತಂಕದ ನಡುವೆ ಚೀನಾದ ಬಂದರು ನಗರಿ ಕ್ಸಿಯಾಮೆನ್‍ನಲ್ಲಿ ಆರಂಭಗೊಂಡ ಮಹತ್ವದ ಬ್ರಿಕ್ಸ್ ಶೃಂಗಸಭೆಯ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಬೇಕು. ಇದಕ್ಕಾಗಿ ಬ್ರಿಕ್ಸ್ ದೇಶಗಳ ನಡುವೆ ಪರಸ್ಪರ ಸಹಕಾರ ಅಗತ್ಯ ಎಂದು ಪ್ರತಿಪಾದಿಸಿದರು.
ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ನಲುಗುತ್ತಿರುವ ವಿಶ್ವದಲ್ಲಿ ಶಾಂತಿ ನೆಲೆಸುವಂತಾಗಬೇಕು. ಇದಕ್ಕಾಗಿ ವಿಶೇಷವಾಗಿ ಬ್ರಿಕ್ಸ್ ರಾಷ್ಟ್ರಗಳೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಕೈಜೋಡಿಸಬೇಕು ಎಂದು ಮೋದಿ ಸಲಹೆ ಮಾಡಿದರು.

DI2zmMsVAAAeo6R

ವಿಶ್ವವು ಅನಿಶ್ಚಿತತೆಯತ್ತ ಸರಿಯುತ್ತಿರುವ ಸನ್ನಿವೇಶದಲ್ಲಿ ರಾಷ್ಟ್ರಗಳ ಸುಸ್ಥಿರತೆ ಮತ್ತು ಪ್ರಗತಿಗೆ ಪರಸ್ಪರ ಸಹಕಾರ ನೀಡಲು ಬ್ರಿಕ್ಸ್ ನೀತಿಯೊಂದನ್ನು ರೂಪಿಸಿದೆ. ಸೌರಶಕ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲವರ್ಧನೆಗೆ ಬ್ರಿಕ್ಸ್ ದೇಶಗಳು ಕೈಜೋಡಿಸುತ್ತವೆ ಎಂದು ಅವರು ತಿಳಿಸಿದರು.
ಕಪ್ಪು ಹಣ ಕುರಿತು ಈ ಸಮ್ಮೇಳನದಲ್ಲೂ ಪ್ರಸ್ತಾಪಿಸಿದ ಅವರು, ಕಾಳಧನದ ವಿರುದ್ಧ ಭಾರತದ ಹೋರಾಟ ಮುಂದುವರಿಯಲಿದೆ. ಈಗಾಗಲೇ ಭ್ರಷ್ಟಾಚಾರದ ವಿರುದ್ಧ ನಡೆದ ಸಮರ ಬಹುಪಾಲು ಯಶಸ್ಸು ಕಂಡಿದೆ ಎಂದು ನುಡಿದರು.

DI2zmMwVoAAZMdS

ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾರ್ವಭೌಮತ್ವ ಮತ್ತು ವಾಣಿಜ್ಯ ಅಸ್ತಿತ್ವಗಳ ಆರ್ಥಿಕ ಅಗತ್ಯಗಳನ್ನು ಪೂರೈಸಲು ಬ್ರಿಕ್ಸ್ ಶ್ರೇಣಿ ಸಂಸ್ಥೆಯನ್ನು ಆದಷ್ಟೂ ಶೀಘ್ರ ಸೃಷ್ಟಿಸುವ ಅಗತ್ಯವಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.   ಬಡತನ ನಿರ್ಮೂಲನೆ, ಆರೋಗ್ಯ, ನೈರ್ಮಲೀಕರಣ, ಕೌಶಲ್ಯ, ಆಹಾರ ಭದ್ರತೆ, ಲಿಂಗಸಮಾನತೆ ಮತ್ತು ಶಿಕ್ಷಣ ಇವುಗಳು ನಮ್ಮ ಪ್ರಥಮಾದ್ಯತೆಯಾಗಿವೆ.  ಭಾರತದಲ್ಲಿನ ಯುವ ಸಮೂಹವೇ ನಮ್ಮ ಪ್ರಬಲ ಶಕ್ತಿ ಎಂದು ಮೋದಿ ಬಣ್ಣಿಸಿದರು.

ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ-ಈ ಐದು ದೇಶಗಳ ನಾಯಕರ ಗ್ರೂಪ್ ಫೋಟೋದೊಂದಿಗೆ ಎರಡು ದಿನಗಳ 9ನೇ ಬ್ರಿಕ್ಸ್ ಶೃಂಗಸಭೆಗೆ ಇಂದು ಚಾಲನೆ ದೊರೆಯಿತು.  ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಆತ್ಮೀಯತೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.  ಮೋದಿ ಭೇಟಿಗೂ ಮುನ್ನ ಚೀನಾ ಅಧ್ಯಕ್ಷರು ರಷ್ಯಾದ ತಮ್ಮ ಸಹವರ್ತಿ ವ್ಲಾದಿಮಿರ್ ಪುಟಿನ್‍ರನ್ನು ಸ್ವಾಗತಿಸಿದರು. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ನಾಯಕರಿಗೂ ಜಿನ್‍ಪಿಂಗ್ ಸ್ವಾಗತ ಕೋರಿದರು.

DIzbPF_VoAEPvsw

ಮೋದಿ ನಾಳೆ ಚೀನಿ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಲು ವೇದಿಕೆ ಸಜ್ಜಾಗಿದೆ. ಡೋಕ್ಲಾ ಬಿಕ್ಕಟ್ಟು ಇತ್ಯರ್ಥ ನಿರೀಕ್ಷೆ : ಈಶಾನ್ಯ ರಾಜ್ಯ ಸಿಕ್ಕಂನ ಡೋಕ್ಲಾಂ ಮುಖಜಭೂಮಿಯಲ್ಲಿ 73 ದಿನಗಳ ಸೇನಾ ಸಂಘರ್ಷ ಅಂತ್ಯಗೊಳಿಸಲು ಭಾರತ ಮತ್ತು ಚೀನಾ ನಿರ್ಧಾರ ಕೈಗೊಂಡ ಒಂದು ವಾರದಲ್ಲೇ ಮೋದಿ ಚೀನಾ ಭೇಟಿ ಪ್ರಾಮುಖ್ಯತೆ ಪಡೆದಿದೆ. ಈ ವಿವಾದವನ್ನು ಶಾಶ್ವತವಾಗಿ ಇತ್ಯರ್ಥಗೊಳಿಸುವ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸುವ ನಿರೀಕ್ಷೆ ಇದೆ.

DIzbQufUMAIyDT5

Facebook Comments

Sri Raghav

Admin