ಉಗ್ರರಿಂದ ಗ್ರೆನೇಡ್ ದಾಳಿ, ನಾಲ್ವರು ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

grenade-attack

ನಂತನಾಗ್, ಸೆ.5-ಕಾಶ್ಮೀರದಲ್ಲಿ ಯೋಧರು ಎನ್‍ಕೌಂಟರ್‍ಗಳಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸುತ್ತಿದ್ದರೂ, ಉಗ್ರರ ಅಟ್ಟಹಾಸ ಮುಂದುವರಿದೇ ಇದೆ. ಕಣಿವೆ ರಾಜ್ಯದ ಅನಂತನಾಗ್ ಜಿಲ್ಲೆಯ ಬಾಝಿಗಂಡ್ ಪ್ರದೇಶದಲ್ಲಿ ನಿನ್ನೆ ಗಸ್ತಿನಲ್ಲಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಮೇಲೆ ಉಗ್ರರು ಗ್ರೆನೇಡ್ ಎಸೆದ ಪರಿಣಾಮ ನಾಲ್ವರು ಯೋಧರು ಗಾಯಗೊಂಡಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‍ನಲ್ಲಿ ಯೋಧರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್-ಎ-ತೈಬಾದ ಇಬ್ಬರು ಭಯೋತ್ಪಾದಕರು ಹತರಾದ ಕೆಲವು ಗಂಟೆ ಬಳಿಕ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ಆಕ್ರಮಣದಲ್ಲಿ ಗಾಯಗೊಂಡಿರುವ ನಾಲ್ವರು ಯೋಧರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದೊಳಗೆ ನುಸುಳಿರುವ ಉಗ್ರರಿಗಾಗಿ ತೀವ್ರ ಶೋಧ ಮುಂದುವರಿದಿದೆ.

Facebook Comments

Sri Raghav

Admin