ಕೃತಕ ಬುದ್ಧಿಮತ್ತೆ ಕುರಿತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹಾರಿದ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ನವದೆಹಲಿ, ಸೆ.5-ಹೈವೋಲ್ಡೇಜ್ ಗುಜರಾತ್ ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಈಗಿನಿಂದಲೇ ಬಿರುಸಿನ ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೃತಕ ಬುದ್ಧಿಮತ್ತೆ (ಅರ್ಟಿಫಿಶಿಯಲ್ ಇಂಟಲಿಜೆನ್ಸ್-ಎಐ) ಕುರಿತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.  ಇತ್ತೀಚಿನ ದಿನಗಳಲ್ಲಿ ವ್ಯಾಪಕ ಜನಪ್ರಿಯತೆ ಪಡೆಯುತ್ತಿರುವ ಭವಿಷ್ಯ ತಂತ್ರಜ್ಞಾನದ ಈ ವಿದ್ಯೆಯನ್ನು ಕಲಿಯಲು ರಾಹುಲ್ ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ 8 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.

ಇದೇ ಸಂದರ್ಭದಲ್ಲಿ ರಾಹುಲ್ ವಾಷಿಂಗ್ಟನ್‍ನ ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್‍ನಲ್ಲಿ ದುಂಡು ಮೇಜಿನ ಸಭೆಯೊಂದರಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಅನಿವಾಸಿ ಭಾರತೀಯರ (ಎನ್‍ಆರ್‍ಐ), ಉದ್ಯಮಿಗಳು, ಹೂಡಿಕೆದಾರರು ಸಮಾವೇಶಗಳಲ್ಲೂ ಪಾಲ್ಗೊಳ್ಳುವರು. ರಾಹುಲ್ ಅವರೊಂದಿಗೆ ಖ್ಯಾತ ತಾಂತ್ರಿಕ ಪರಿಣಿತರೂ ಹಾಗೂ ಗಾಂಧಿ ಕುಟುಂಬದ ಮಿತ್ರರೂ ಆದ ಸ್ಯಾಮ್ ಪಿಟ್ರೋಡಾ ಸಹ ತೆರಳಲಿದ್ದಾರೆ.

Facebook Comments

Sri Raghav

Admin