ಗುಂಪು ಘರ್ಷಣೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.5-ಗುಂಪು ಘರ್ಷಣೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವನ್ನದ್ದಾನೆಂಬ ಗಾಳಿ ಸುದ್ದಿಯಿಂದ ರೊಚ್ಚಿಗೆದ್ದ ಯುವಕರು ಬಸ್ ಮೇಲೆ ಕಲ್ಲು ತೂರಿ ದಾಂಧಲೆ ನಡೆಸಿದ್ದರಿಂದ ಗ್ರಾಮಾಂತರ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಘಟನೆ ವಿವರ:
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದ ಬಳಿ ಇರುವ ರಾಜರಾಜೇಶ್ವರಿ ಕಟ್ಟೆ ಬಳಿ ಮೈಸೂರಿನಿಂದ ತೆರಳಿದ್ದ ಯುವಕರ ಗುಂಪೊಂದು ಸಂಜೆ ಪಾನಮತ್ತರಾಗಿ ದಾರಿಯಲ್ಲಿ ಹೋಗುವ ಮಹಿಳೆಯರನ್ನು ಕಂಡು ಅಸಭ್ಯವಾಗಿ ವರ್ತಿಸುತ್ತಿದ್ದರೆಂದು ಹೇಳಲಾಗಿದೆ. ಯುವಕರ ವರ್ತನೆಯಿಂದ ಆಕ್ರೋಶಗೊಂಡ ಸ್ಥಳೀಯರು ಇವರನ್ನು ಪ್ರಶ್ನಿಸಿದಾಗ ಅವರೊಂದಿಗೂ ಅನುಚಿತವಾಗಿ ವರ್ತಿಸಿದ್ದು , ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆಗೆ ತಿರುಗಿದಾಗ ತಳ್ಳಾಟ, ನೂಕಾಟ ಉಂಟಾಗಿದೆ.

ಈ ವೇಳೆ ಯುವಕನೊಬ್ಬ ನಿತ್ರಾಣಗೊಂಡಿದ್ದರಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಯುವಕರು ಮೈಸೂರಿಗೆ ಹಿಂದಿರುಗಲು ಬಸ್ ಹತ್ತಿದ್ದಾರೆ.
ಈ ಯುವಕರು ಮೈಸೂರಿಗೆ ತೆರಳಿ ವಿಷಯ ತಿಳಿಸುವುದರೊಳಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರಕ್ಕೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆದಿದ್ದು , ಆತ ಸಾವನಪ್ಪಿದ್ದಾನೆಂಬ ಗಾಳಿ ಸುದ್ದಿ ಹರಡಿದೆ.  ಇದರಿಂದಾಗಿ ಸಂಜೆ ಶಾಂತಿನಗರ, ಮಹದೇವಪುರದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಗಾಳಿ ಸುದ್ದಿಯಿಂದ ರೊಚ್ಚಿಗೆದ್ದ ಗುಂಪೊಂದು ಖಾಸಗಿ ಬಸ್ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ.

ಸುದ್ದಿ ತಿಳಿದ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರನ್ನು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.  ಈ ಘಟನೆಯಿಂದಾಗಿ ಮೈಸೂರು ಮತ್ತು ಮಂಡ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು , ಪರಿಸ್ಥಿತಿ ನಿಯಂತ್ರಣದಲ್ಲಿದೆ.

Facebook Comments

Sri Raghav

Admin