ಗೋಲ್ಡ್ ಕಾರ್ಡ್ ನಕಲು ತಡೆಗೆ ಆರ್‍ಎಫ್‍ಐಡಿ ಚಿಪ್ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಸೆ.5- ಈ ಬಾರಿ ದಸಾರ ಮಹೋತ್ಸವದಲ್ಲಿ ಗೋಲ್ಡ್ ಕಾರ್ಡ್ ನಕಲು ತಡೆಯಲು ಆರ್‍ಎಫ್‍ಐಡಿ ಚಿಪ್ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷ ಅಧಿಕಾರಿಯೂ ಆಗಿರುವ ರಂದೀಪ್ ತಿಳಿಸಿದ್ದಾರೆ.  ಈ ಬಾರಿ ಒಂದು ಸಾವಿರ ಗೋಲ್ಡ್ ಕಾರ್ಡ್ ಸಿದ್ದಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಎಲ್ಲಾ ಗೋಲ್ಡ್ ಕಾರ್ಡ್‍ಗಳಿಗೂ ಆರ್‍ಎಫ್‍ಐಡಿ ಚಿಪ್ ಅಳವಡಿಸಲಾಗುವುದು ಎಂದರು. ಈ ಕಾರ್ಡ್‍ನ್ನು ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಈ ಕಾರ್ಡ್ ಪಡೆದವರನ್ನು ಮಾತ್ರ ಬಿಡಲಾಗುತ್ತದೆ ಎಂದು ಅವರು ಹೇಳಿದರು.

ಗೋಲ್ಡ್ ಕಾರ್ಡ್ ಪಡೆದವರಿಗೆ ಬ್ಯಾಂಡ್ ನೀಡಲಾಗುತ್ತದೆ. ಅದನ್ನು ಧರಿಸುವುದರಿಂದ ಇವರು ಗೋಲ್ಡ್ ಕಾರ್ಡ್ ಪಡೆದವರೆಂದು ಗುರುತಿಸಲು ಸಹಕಾರಿಯಾಗುತ್ತದೆ ಎಂದರು. ಗೋಲ್ಡ್ ಚಾರಿಯೇಟ್‍ನಲ್ಲಿ 75 ಮಂದಿ ಪ್ರವಾಸಿಗರು ಆಗಮಿಸುತ್ತಿದ್ದು, ಕೆಎಸ್‍ಟಿಡಿಸಿ 75 ಗೋಲ್ಡ್ ಕಾರ್ಡ್‍ಗೆ ಬೇಡಿಕೆಯನ್ನಟ್ಟಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin