ಟ್ಯಾಕ್ಸಿವೇನಲ್ಲಿ ಮುಗ್ಗರಿಸಿದ ವಿಮಾನ, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Plane-Kerala--01

ಕೊಚ್ಚಿ/ಮುಂಬೈ, ಸೆ.5-ಏರ್ ಇಂಡಿಯಾ ವಿಮಾನವೊಂದು ಟ್ಯಾಕ್ಸಿವೇನಲ್ಲಿ ಮುಗ್ಗರಿಸಿದ ಘಟನೆ ಇಂದು ನಸುಕಿನಲ್ಲಿ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ 102 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಅಬುಧಾಬಿಯಿಂದ ಕೊಚ್ಚಿಗೆ ಬಂದಿಳಿಯುತ್ತಿದ್ದ ಬೋಯಿಂಗ್ 737-800 ವಿಮಾನ ಟ್ಯಾಕ್ಸ್‍ವೇನಲ್ಲಿ ಮುಗ್ಗರಿಸಿತು. ಈ ಅವಘಡದಲ್ಲಿ ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲರೂ ಪಾರಾಗಿದ್ದಾರೆ. 102 ಪ್ರಯಾಣಿಕರನ್ನು ಸುರಕ್ಚಿತವಾಗಿ ಏಣಿಗಳ ಮೂಲಕ ತೆರವುಗೊಳಿಸಲಾಯಿತು. ಯಾರಿಗೂ ಗಾಯಗಳಾಗಿಲ್ಲ ಎಂದು ಕೊಚ್ಚಿನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್(ಸಿಐಎಎಲ್) ವಕ್ತಾರರು ತಿಳಿಸಿದ್ದಾರೆ.

ಅಬುಧಾಬಿಯಿಂದ ಬಂದ ವಿಮಾನ ಇಂದು ಮುಂಜಾನೆ 2.39ರಲ್ಲಿ ಭೂಸ್ಪರ್ಶ ಮಾಡಿದ ನಂತರ ಟ್ಯಾಕ್ಸಿವೇನಿಂದ ನಿಲುಗಡೆ ಸ್ಥಳಕ್ಕೆ ಸಾಗುತ್ತಿದ್ದಾಗ 2.40ರಲ್ಲಿ ಈ ಘಟನೆ ನಡೆಯಿತು ಎಂದು ಅವರು ಹೇಳಿದ್ದಾರೆ.  ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಮುಗ್ಗರಿಸಿದ ಪರಿಣಾಮವಾಗಿ ಅದರ ಮುಂದಿನ ಚಕ್ರಕ್ಕೆ ಹಾನಿಯಾಗಿದೆ ಎಂದು ಏರ್‍ಲೈನ್ ಮೂಲಗಳು ಹೇಳಿವೆ. ಘಟನೆ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಣ ಮಂಡಳಿ ಡಿಜಿಸಿಎ ಆಂತರಿಕ ತನಿಖೆಗೆ ಆದೇಶಿಸಿದೆ.

Facebook Comments

Sri Raghav

Admin