ತುಮಕೂರಿನಲ್ಲಿ ಡಿಸಿ ಕಚೇರಿಗೆ ಮುತ್ತಿಗೆಹಾಕಲೆತ್ನಿಸಿದ ರೈತರು, ಲಘು ಲಾಠಿ ಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

Tumakuru--01

ತುಮಕೂರು, ಸೆ.5- ಹೇಮಾವತಿ ನೀರನ್ನು ತುಮಕೂರು ಗ್ರಾಮಂತರ ಕ್ಷೇತ್ರಕ್ಕೆ ಹರಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿವೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ ವೇಳೆ ಲಘುಲಾಠಿ ಪ್ರಹಾರ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರಿಂದ ಗಲಾಟೆ ಜೋರಾಗಿ ಲಘು ಲಾಠಿ ಪ್ರಹಾರವನ್ನು ಪೊಲೀಸರು ಮಾಡಿದರು.ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಹಾಗೂ ಕೆಲ ಪೊಲೀಸರು ಮತ್ತು ಹೋಂಗಾರ್ಡ್‍ಗಳಿಗೆ ಕಲ್ಲೇಟು ಬಿದ್ದು ಗಾಯಗಳಾಗಿವೆ.ಈ ಸಂದರ್ಭದಲ್ಲಿ ಡಿಸಿ ಕಚೇರಿ ಸುತ್ತಮುತ್ತ ನೂರಾರು ರೈತರು, ಸಾರ್ವಜನಿಕರು ಜಮಾಯಿಸಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Tumakuru 04

ಶಾಸಕ ಸುರೇಶ್‍ಗೌಡ ಅವರನ್ನು ಪೊಲೀಸರು ಬಂಧಿಸಿದ ಕೂಡಲೇ ರೊಚ್ಚಿಗೆದ್ದ ಜನರು ಒಂದೆರಡು ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ಕಲ್ಲು ತೂರಾಟ ಮಾಡಿದರು. ನಂತರ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ 50ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದರು. ನವೇನು ಕಳ್ಳರಾ, ಕುಡಿಯಲು ನೀರು ಕೊಡಿ ಎಂದು ಕೇಳಿದರೆ ಬಂಧಿಸುತ್ತೀರಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Tumakuru 03

Tumakuru 02

Tumakuru 01

Facebook Comments

Sri Raghav

Admin