ದಸರಾ ಆನೆಗಳ ಮಾವುತರು, ಕಾವಾಡಿಗಳಿಗೆ ಜಿಲ್ಲಾಡಳಿತ ವತಿಯಿಂದ ಉಪಹಾರ

ಈ ಸುದ್ದಿಯನ್ನು ಶೇರ್ ಮಾಡಿ

Mysureu-Dasara--01

ಮೈಸೂರು, ಸೆ.5- ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಜಿಲ್ಲಾಡಳಿತ ವತಿಯಿಂದ ಇಂದು ಬೆಳಗ್ಗೆ ಉಪಹಾರ ಏರ್ಪಡಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಾವುತರಿಗೆ ಉಪಹಾರ ಬಡಿಸಿ ನಂತರ ಅವರೊಂದಿಗೆ ಕುಳಿತು ಆಹಾರ ಸೇವಿಸಿದರು.

ಎಲ್ಲರಿಗೂ ಹೋಳಿಗೆ, ಇಡ್ಲಿ, ವಡೆ, ದೋಸೆ, ಸಾಂಬರ್, ಚಟ್ನಿ, ಪೊಂಗಲ್ ಮತ್ತಿತರೆ ಖಾದ್ಯಗಳನ್ನು ನೀಡಲಾಯಿತು. ಉಪಹಾರದ ನಂತರ ಸಚಿವರನ್ನು ಭೇಟಿ ಮಾಡಿದ ಮಾವುತರು, ನಮಗೆ ಕಡಿಮೆ ಭತ್ಯೆ ನೀಡುತಿದ್ದು, ಅದು ಕೂಡ ಸರಿಯಾಗಿ ಕೊಡುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಮೊದಲು ನಿಮಗೆ 500ರೂ. ವೇತನ ಬರುತ್ತಿದ್ದು, ಇನ್ನು ಮುಂದೆ 1050ರೂ. ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಮೇಯರ್ ರವಿಕುಮಾರ್, ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin