ಬಿಜೆಪಿಯ ‘ಮಂಗಳೂರು ಚಲೋ’ ರ‍್ಯಾಲಿ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

Bike-Rally--01

ಬೆಂಗಳೂರು,ಸೆ.5-ಪೊಲೀಸರ ಅನುಮತಿಯನ್ನು ನಿರಾಕರಿಸಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಕೆಲವು ಕಡೆ ಅಡ್ಡಿ ಉಂಟಾಗಿದ್ದರಿಂದ ಅಕ್ಷರಶಃ ಕರ್ನಾಟಕ ರಣರಂಗವಾಗಿದೆ.  ಶತಾಯಗತಾಯ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಯಶಸ್ವಿಗೊಳಿಸಲು ಬಿಜೆಪಿ ಯುವ ಮೋರ್ಚಾ ಪಟ್ಟು ಹಿಡಿದಿದ್ದರೆ, ಕಾನೂನು ಸುವ್ಯವಸ್ಥೆ ಮುಂದಿಟ್ಟುಕೊಂಡು ರ್ಯಾಲಿಯನ್ನು ಚಿವುಟಿ ಹಾಕಲು ಪೊಲೀಸರ ಮೂಲಕ ಸರ್ಕಾರ ಶತಪ್ರಯತ್ನ ನಡೆಸಿದೆ.

ಕೆಲವು ಕಡೆ ನಿರ್ಬಂಧವಿದ್ದರೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾನೂನು ಉಲ್ಲಂಘಿಸಿ ಬೈಕ್ ರ್ಯಾಲಿಯನ್ನು ನಡೆಸಲು ಮುಂದಾದ ವೇಳೆ ಅಲ್ಲಲ್ಲಿ ಪರಸ್ಪರ ಮಾತಿನ ಚಕಮಕಿ, ನೂಕುನುಗ್ಗುಲು, ತಳ್ಳಾಟ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ವಿವಿಧೆಡೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.  ನಿನ್ನೆಯೇ ಬಹುತೇಕ ಕಡೆ ಜಿಲ್ಲಾಧಿಕಾರಿಗಳು(ಡಿಸಿ), ಪೊಲೀಸ್ ವರಿಷ್ಠಾಧಿಕಾರಿಗಳು(ಎಸ್‍ಪಿ) ನಿರ್ಬಂಧ ಹಾಕಿದ್ದರು. ಆದರೆ ಇದನ್ನು ಲೆಕ್ಕಿಸದೆ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಮೈಸೂರು, ಶಿವಮೊಗ್ಗ , ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ರಾಯಚೂರು ಸೇರಿದಂತೆ ಅನೇಕ ಕಡೆ ಬೈಕ್ ರ್ಯಾಲಿ ನಡೆಸಲು ಉದ್ದೇಶಿಸಿದ್ದರು.

ಬೆಳಗ್ಗೆ 6 ಗಂಟೆಯಿಂದಲೇ ಬಹುತೇಕ ಬೆಂಗಳೂರು ಮತ್ತು ಇತರ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಹಾಕಲಾಗಿತ್ತು. ಇದನ್ನು ಉಲ್ಲಂಘಿಸಿ ರ್ಯಾಲಿ ನಡೆಸಲು ಮುಂದಾದ ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

IMG_20170905_101938

ಲಘು ಲಾಠಿ ಪ್ರಹಾರ:

ಕೋಲಾರ ಜಿಲ್ಲೆಯಲ್ಲಿ ಪೊಲೀಸರ ದಿಕ್ಕು ತಪ್ಪಿಸಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದ ಬಿಜೆಪಿ ಮುಖಂಡರನ್ನು ನಾಗರಗುಂಟೆ ಬಳಿ ಬಂಧಿಸಿದ್ದಾರೆ. ಮಾಜಿ ಶಾಸಕರಾದ ವೈ.ಸಂಪಂಗಿ, ನಾರಾಯಣಸ್ವಾಮಿ, ಬಿ.ಪಿ.ವೆಂಕಟ ಮುನಿಯಪ್ಪ ಸೇರಿದಂತೆ 55 ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ.
ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಬೆಳೆದಿದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಜಿಲ್ಲಾಧ್ಯಕ್ಷೆ ಮಮತಾ ಎಂಬುವರು ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಮುಳಬಾಗಿಲಿನಲ್ಲೂ ಎಂಟು ಮಂದಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಚಿಕ್ಕಬಳ್ಳಾಪುರದಲ್ಲೂ ಬೈಕ್ ರ್ಯಾಲಿಗೆ ಹೊರಟ್ಟಿದ್ದ 15 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇತ್ತ ದೊಡ್ಡಬಳ್ಳಾಪುರದಲ್ಲೂ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಗಡಿಜಿಲ್ಲೆ ಬೆಳಗಾವಿಯಲ್ಲಿ ಬೈಕ್ ರ್ಯಾಲಿ ನಡೆಸಲು ಹೊರಟಿದ್ದ ಕಿತ್ತೂರು ಬಳಿ ಯುವ ಮೋರ್ಚಾದ ಹಲವಾರು ಕಾರ್ಯಕರ್ತರನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದರು.

ನಿರ್ಬಂಧ ಉಲ್ಲಂಘಿಸಿ ಬೆಳಗಾವಿಯಿಂದ ಯುವ ಮೋರ್ಚಾ ಕಾರ್ಯಕರ್ತರು ಕಿತ್ತೂರು ಬಳಿ ರಾಣಿ ಚನ್ನಮ್ಮ ವೃತ್ತದದತ್ತ ಬರುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ತಕ್ಷಣವೇ ಪೊಲೀಸರು ಕೆಲ ಕಾರ್ಯಕರ್ತರನ್ನು ಬಂಧಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.  ಹುಬ್ಬಳ್ಳಿಯಲ್ಲೂ ಕೆಲ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇಲ್ಲಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.
ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತ ಎಂ.ನಾಗರಾಜ್ ನಿನ್ನೆ ಸಂಜೆಯೇ ಬೈಕ್ ರ್ಯಾಲಿಗೆ ನಿರ್ಬಂಧ ಹಾಕಿದ್ದರು. ಬೆಳಗ್ಗೆ 10 ಗಂಟೆಗೆ ಕೆಲ ಕಾರ್ಯಕರ್ತರು ಚನ್ನಮ್ಮ ರಾಣಿ ವೃತ್ತದ ಬಳಿ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾಗಿ ವರದಿಯಾಗಿದೆ.

ಬಳ್ಳಾರಿಯಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಮುನ್ಸಿಪಾಲ್ ಕಾಲೇಜು ಬಳಿ ಬೈಕ್ ರ್ಯಾಲಿಗೆ ಹೊರಟ್ಟಿದ್ದ ಅನೇಕ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರು.  ನಿಯಮ ಉಲ್ಲಂಘಿಸಿ ರ್ಯಾಲಿ ನಡೆಸಲು ಹೊರಟಿದ್ದ ದ್ವಿಚಕ್ರ ಸವಾರರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು. ಇದೇ ರೀತಿ ತುಮಕೂರು, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಅನೇಕ ಕಡೆ ಬಿಜೆಪಿಯ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

PUR_8160

PUR_8270

PUR_8289

 

IMG_20170905_102126

IMG_20170905_103452

ಹೆದ್ದಾರಿಯಲ್ಲಿ ಮಲಗಿದ ಕಾರ್ಯಕರ್ತರು:

ಬೈಕ್ ರ್ಯಾಲಿಗೆ ಅನುಮತಿ ನೀಡದ ಪೊಲೀಸರ ವರ್ತನೆಯನ್ನು ಖಂಡಿಸಿ ನೆಲಮಂಗಲದ ಹೆದ್ದಾರಿ ಬಳಿ ಬಿಜೆಪಿಯ ನೂರಾರು ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪೊಲೀಸರ ಮತ್ತು ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

IMG_20170905_103544

ಹದ್ದಿನ ಕಣ್ಣು:

ಇನ್ನು ಪೊಲೀಸರಿಂದ ಅನುಮತಿ ಪಡೆದು ಬೈಕ್ ರ್ಯಾಲಿ ನಡೆಸಲು ಮುಂದಾಗಿರುವ ಕಾರ್ಯಕರ್ತರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಬೆಂಗೂರಿನ ಫ್ರೀಡಂಪಾರ್ಕ್‍ನಿಂದ ನೆಲಮಂಗಲ, ಕುಣಿಗಲ್, ಹಾಸನ ಮೂಲಕ ಬೈಕ್ ರ್ಯಾಲಿ ಮಂಗಳೂರಿಗೆ ತಲುಪಲಿದೆ. ಈ ಸ್ಥಳಗಳಲ್ಲಿ ಹಾದುಹೋಗುವ ಕಡೆ ಕಾರ್ಯಕರ್ತರ ಚಲನವಲನಗಳ ಮೇಲೆ ನಿಗಾವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.  ನೆಲಮಂಗಲ ಟೋಲïನಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು ಪ್ರತಿಯೊಂದು ವಾಹನದ ತಪಾಸಣೆ ನಡೆಸಿದರು. ಅಲ್ಲದೇ ಬಿಜೆಪಿ ಮುಖಂಡರು ಜಾಥಾ ತಡೆದಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಬೈಕ್ ಜಾಥಾಕ್ಕೆ ನಿಷೇಧ ಹೇರಲಾಗಿದೆ.

ನಾಳೆ ಮೈಸೂರಿನಲ್ಲಿ ನಿಷೇಧಾಜ್ಞೆ: ಈ ನಡುವೆ ಬಿಜೆಪಿಯವರು ನಾಳೆ ನಗರದಲ್ಲಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೈಕ್‍ರ್ಯಾಲಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ರ್ಯಾಲಿಯನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಸೆ.8ರ ಬೆಳಗ್ಗೆ 6 ಗಂಟೆ ವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದರು.

ಒಂದು ವೇಳೆ ಬಿಜೆಪಿಯವರು ನಿಷೇಧಾಜ್ಞೆ ಮೀರಿ ಬೈಕ್ ರ್ಯಾಲಿ ಮಾಡಲು ಮುಂದಾದರೆ ಕಾರ್ಯಕರ್ತರನ್ನು ಬಂಧಿಸಲಾಗುತ್ತದೆ. ಮೈಸೂರು ಜೈಲು ಹೊರತು ಪಡಿಸಿ ಬೇರೆ ಬೇರೆ ಜೈಲುಗಳಿಗೆ ಅವರನ್ನು ರವಾನಿಸಲಾಗುತ್ತದೆ. ಬಂಧಿತರ ವಿರುದ್ಧ ರೌಡಿಶೀಟರ್ ತೆರೆಯಲಾಗುವುದು ಎಂದು ಅವರು ಎಚ್ಚರಿಸಿದರು. ಬೈಕ್ ರ್ಯಾಲಿ ತೆರಳುತ್ತಿರುವ ಮಾರ್ಗ ಸೂಕ್ಷ್ಮ ಪ್ರದೇಶವಾಗಿದೆ. ಹಾಗಾಗಿ ಈ ರ್ಯಾಲಿಯನ್ನು ಆರಂಭದ ಸ್ಥಳವಾಗಿರುವ ಮೈಸೂರಿನಲ್ಲಿ ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ರಾಜಕೀಯ ಪ್ರೇರಿತ ಕಾರ್ಯಕ್ರಮಗಳಿಗಾಗಿ ಆಯೋಜಿಸಿರುವ ಬೈಕ್ ರ್ಯಾಲಿಗೆ ಈ ಹಿಂದೆಯೂ ಅನುಮತಿ ನೀಡಿರಲಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾಳೆ ಏನಾದರೂ ಗಲಭೆ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದರೆ ಪೊಲೀಸರಾಗಲಿ, ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಹೊಣೆಯಲ್ಲ. ಕಾರ್ಯಕ್ರಮ ಆಯೋಜಕರೆ ಹೊಣೆಗಾರರು. ಹಾಗಾಗಿ ಅವರಿಂದ ನಷ್ಟದ ಹಣ ಭರಿಸಲಾಗುತ್ತದೆ. ನಾಳೆ ಆಯೋಜಿಸುವ ಬೈಕ್ ರ್ಯಾಲಿ ಖರ್ಚು, ವೆಚ್ಚದ ಐಟಿ ಹಾಗೂ ಇಡಿ ತನಿಖೆಗೆ ಸೂಚಿಸಲಾಗುತ್ತದೆ ಎಂದು ಸುಭ್ರಮಣ್ಯೇಶ್ವರ ರಾವ್ ತಿಳಿಸಿದರು.

IMG_20170905_103637

MCS_2907

MCS_2915

MCS_2931

MCS_2939

MCS_2969

MCS_2980

MCS_2982 MCS_3032

IMG_20170905_105206

ಬೈಕ್ ರ್ಯಾಲಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ :
ಮೈಸೂರು, ಸೆ.5- ಮಂಗಳೂರಿಗೆ ಬಿಜೆಪಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ನಗರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಇಂದಿಲ್ಲಿ ತಿಳಿಸಿದರು. ತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸರು ರ್ಯಾಲಿ ನಡೆಸದಂತೆ ಸೂಚಿಸಿದ್ದಾರೆ. ಆದರೆ ರ್ಯಾಲಿ ವೇಳೆ ಯಾವುದೇ ಕಾನೂನು ಉಲ್ಲಂಘಿಸುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇವೆ.  ನಾಳೆ ಬೆಳಗ್ಗೆ 9.30ಕ್ಕೆ ಕೋಟೆ ಆಂಜನೇಯ ದೇವಸ್ಥಾನದಿಂದ ಬೈಕ್ ರ್ಯಾಲಿ ಹೊರಡಲಿದ್ದು, ಮುಖಂಡರಾದ ಸದಾನಂದಗೌಡ, ಅಶೋಕ್, ಸಿ.ಟಿ.ರವಿ ಅವರು ತಮ್ಮನ್ನು ಬೀಳ್ಕೊಡಲಿದ್ದಾರೆ ಎಂದರು.

ನಾಳೆ 1,200 ಬೈಕ್‍ನಲ್ಲಿ 2,400 ಮಂದಿ ಹೊರಡಲಿದ್ದು, ರ್ಯಾಲಿ ವೇಳೆ ಯಾವುದೇ ಸಂಚಾರ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿರುವುದಾಗಿ ಅವರು ಹೇಳಿದರು. ಮೈಸೂರಿನಿಂದ ನಾಳೆ ಬೆಳಗ್ಗೆ ತೆರಳಿ ಸುಳ್ಯದಲ್ಲಿ ಉಳಿದುಕೊಂಡು ಕೆಲವು ಕಡೆ ಸಭೆ ನಡೆಸಿ ಮಂಗಳೂರಿಗೆ ತೆರಳುತ್ತೇವೆ. ಈ ಹಿಂದೆಯೇ ರ್ಯಾಲಿ ಬಗ್ಗೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಪೊಲೀಸ್ ಇಲಾಖೆ ಇದೀಗ ರ್ಯಾಲಿ ನಡೆಸದಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ ರ್ಯಾಲಿಯನ್ನು ನಿಲ್ಲಿಸುವುದಿಲ್ಲ ಎಂದರು.

ರ್ಯಾಲಿ ವೇಳೆ ಪಟ್ಟಭದ್ರ ಹಿತಾಸಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ರ್ಯಾಲಿಯನ್ನು ಕೈ ಬಿಡುವಂತೆ ಪೊಲೀಸರು ಹೇಳಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಿ, ಬಂಧಿಸಲಿ ಆದರೆ ರ್ಯಾಲಿಯನ್ನು ಏಕೆ ತಡೆಯಬೇಕು ಎಂದು ಹೇಳಿದರು.

ರ್ಯಾಲಿಯ ಉದ್ದೇಶ: ಕಳೆದ ಮೂರು ವರ್ಷಗಳಲ್ಲಿ 24 ಹಿಂದೂಗಳ ಕೊಲೆಯಾಗಿದೆ. ಇದನ್ನು ಕೆಎಫ್‍ಡಿ, ಪಿಎಫ್‍ಐ ಸಂಘಟನೆ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು , ಈ ಎರಡು ಸಂಘಟನೆಗಳು ರಾಜ್ಯ ಸರ್ಕಾರ ನಿಷೇಧ ಮಾಡಬೇಕೆಂಬ ಹಿನ್ನೆಲೆಯಲ್ಲಿ ಹಾಗೂ ಜನರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರ್ಯಾಲಿ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಮುಖಂಡ ನಾಗೇಂದ್ರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

 

IMG_20170905_105316

IMG_20170905_105548

kolar05

 

 

Facebook Comments

Sri Raghav

Admin