ಬಿಜೆಪಿ ಕಾರ್ಯಕರ್ತರಿಗೆಂದು ತಯಾರಿಸಿದ್ದ ಊಟವೇ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Bsdgfsdgdfh

ನೆಲಮಂಗಲ, ಸೆ.5- ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರಿಗೆಂದು ತಯಾರಿಸಿದ್ದ ಊಟವೇ ನಾಪತ್ತೆಯಾಗಿರುವ ಘಟನೆ ನೆಲಮಂಗಲ ಸಮೀಪದ ಗುಡೆಮಾರನಹಳ್ಳಿ ಬಳಿ ನಡೆದಿದೆ. ಬಿಜೆಪಿ ಯುವಮೋರ್ಚಾದಿಂದ ಮಂಗಳೂರು ಚಲೋ ರ್ಯಾಲಿ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಇವರಿಗಾಗಿ ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಅಡುಗೆ ತಯಾರಿಸಲಾಗಿತ್ತು. ಸಮುದಾಯಭವನದಲ್ಲಿ ರೆಡಿಯಾಗಿದ್ದ ಊಟ ರಾತ್ರೋರಾತ್ರಿ ನಾಪತ್ತೆಯಾಗಿದೆ.

ಸಾವಿರಾರು ಮಂದಿಗೆ ಊಟ ತಯಾರು ಮಾಡಲಾಗಿತ್ತು. ರ್ಯಾಲಿಗೆಂದು ಆಗಮಿಸುವವರಿಗೆ ಇಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಾವಿರಾರು ಜನ ಇಲ್ಲಿಗೆ ಬರದಂತೆ ತಡೆಯಲು ಕುದೂರು ಪೊಲೀಸರಿಂದ ಊಟವನ್ನು ಹೊರಗೆ ಸಾಗಾಟ ಮಾಡಲಾಗಿದೆ ಎಂದು ಹೇಳಲಾಗಿದೆ.  ಹೀಗಾಗಿ ಬೈಕ್ ರ್ಯಾಲಿಗೆ ಬ್ರೇಕ್ ಬಿದ್ದಿದೆ. ತಯಾರಾಗಿದ್ದ ಊಟವನ್ನು ಇಲ್ಲಿನ ಸ್ಥಳೀಯರಿಗೆ ಪೊಲೀಸರು ವಿತರಿಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin