ಮಂಗಳೂರಿನಲ್ಲಿ ಗಲಾಟೆ ಮಾಡಲ್ಲ ಎಂದು ಬಿಜೆಪಿಯವರು ಬರೆದುಕೊಟ್ಟರೆ ಅನುಮತಿ ನೀಡುತ್ತೇವೆ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--01

ಬೆಂಗಳೂರು,ಸೆ.5-ಮಂಗಳೂರಿನಲ್ಲಿ ಗಲಾಟೆ ಮಾಡುವುದಿಲ್ಲ ಎಂದು ಬಿಜೆಪಿಯವರು ಬರೆದುಕೊಡಲಿ. ಆಗ ಪ್ರತಿಭಟನೆಗೆ ಅನುಮತಿ ನೀಡುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು. ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಿಯಾದ ದಾಖಲೆ ನೀಡಿದರೆ ಬೈಕ್ ರ್ಯಾಲಿಗೂ ಪೊಲೀಸರು ಅವಕಾಶ ನೀಡುತ್ತಿದ್ದರು. ಸರಿಯಾದ ದಾಖಲೆ ನೀಡದ ಪರಿಣಾಮ ರ್ಯಾಲಿಗೆ ಅವಕಾಶ ನೀಡಿಲ್ಲ ಎಂದರು.

ಇದು ಪ್ರಜಾಪ್ರಭುತ್ವ. ಇಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿಯವರು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರ್ಯಾಲಿಯ ಮೂಲಕ ಕೋಮುಸಾಮರಸ್ಯವನ್ನು ಹಾಳು ಮಾಡಲು ಮುಂದಾಗಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ನಾವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಶಾಂತಿಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು. ಮಂಗಳೂರಿನಲ್ಲಿ ಗಲಾಟೆ ಮಾಡುವುದಿಲ್ಲ ಎಂದು ಅವರು ಬರೆದುಕೊಡಲಿ. ಆಗ ರ್ಯಾಲಿಗೆ ಅನುಮತಿ ನೀಡುತ್ತೇವೆ ಎಂದು ಪುನರುಚ್ಚರಿಸಿದರು.

Facebook Comments

Sri Raghav

Admin