ಮೈಸೂರು ದಸರಾ ಮಹೋತ್ಸವದಲ್ಲಿ ನಳಪಾಕ ಸ್ಪರ್ಧೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.5- ದಸರಾ ಆಹಾರ ಮೇಳ ರುಚಿಯಾದ ಮತ್ತು ಶುಚಿಯಾದ ಆಹಾರವನ್ನು ಒದಗಿಸುವುದಲ್ಲದೆ, ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಮೆರಗು ನೀಡಲಿದೆ. ಈ ಮೇಳದಲ್ಲಿ ಸೆ.22 ರಿಂದ 28ರ ವರೆಗೆ ಪ್ರತಿದಿನಿ ಬೆಳಗ್ಗೆ 12 ಗಂಟೆಯಿಂದ 2 ಗಂಟೆವರೆಗೆ ನಳಪಾಕ ಎಂಬ ಅಡುಗೆ ಸರ್ಧೆಗಳನ್ನು ಏರ್ಪಡಿಸಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಅರ್ಜಿಗಳನ್ನು ಆಹಾರಮೇಳ ಕಚೇರಿ ಉಪನಿರ್ದೇಶಕರು ಆಹಾರ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಪಡೆದು ಸೂಕ್ತ ದಾಖಲೆಯೊಡನೆ ಇದೆ ಸೆ.15 ರೊಳಗೆ ಸಲ್ಲಿಸಲು ಸೂಚಿಸಿದೆ.

ಅಡುಗೆ ತಯಾರಿಸಲು ಸ್ಪರ್ಧಾಳುಗಳು ಸ್ವತಃ ಅವಶ್ಯವಿರುವ ಪಾತ್ರೆ ಪರಿಕರಗಳನ್ನು ತರಬೇಕು, ಮೇಜು ಮತ್ತು ಗ್ಯಾಸ್ ಸ್ಟೌವ್ ಮತ್ತು ಅಡುಗೆ ಅನಿಲವನ್ನು ಸಂಯೋಜಕರು ಒದಗಿಸಲಿದ್ದಾರೆ. ಪ್ರತಿ ಸ್ಪರ್ಧೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು.  ಹೆಚ್ಚಿನ ಮಾಹಿತಿಗೆ ನಳಪಾಕ ಸ್ಪರ್ಧೆಗಳ ಸಂಚಾಲಕರಾದ ಕಾಳನಾಯಕ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಹೆಚ್.ಡಿ.ಕೋಟೆ ತಾಲ್ಲೂಕು (9886683298) ಹಾಗೂ ವಸಂತಕುಮಾರಿ ಪ್ರಥಮ ದರ್ಜೆ ಸಹಾಯಕರು (990263878) ರವರನ್ನು ಸಂಪರ್ಕಿಸಲು ಕೋರಿದೆ.

Facebook Comments

Sri Raghav

Admin