ರಾಮ್ ರಹೀಂನ ಡೇರಾ ಆಶ್ರಮದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

ಈ ಸುದ್ದಿಯನ್ನು ಶೇರ್ ಮಾಡಿ

Dera-sacha-soudha--01

ಸಿರ್ಸಾ (ಹರಿಯಾಣ), ಸೆ.5-ಅತ್ಯಾಚಾರ ಪ್ರಕರಣಗಳಿಗಾಗಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹರಿಯಾಣದ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್ ನೇತೃತ್ವದ ಡೇರಾ ಸಚ್ಚಾ ಸೌಧ (ಡಿಎಸ್‍ಎಸ್) ಆಶ್ರಮದಲ್ಲಿನ ಅಕ್ರಮ-ಅವ್ಯವಹಾರಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.
ಸಿರ್ಸಾದಲ್ಲಿರುವ ಡಿಎಸ್‍ಎಸ್ ಕೇಂದ್ರ ಕಚೇರಿಯಲ್ಲಿ ಶೋಧ ಮುಂದುವರಿಸಿರುವ ಹರಿಯಾಣದ ಪೊಲೀಸರಿಗೆ ಆಶ್ರಮದಲ್ಲಿ ಭಾರೀ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ.

ಲೈಸನ್ಸ್ ಹೊಂದಿರುವ ಶಸ್ತ್ರಾಸ್ತ್ರಗಳು, 9-ಎಂಎಂ ಪಿಸ್ತೂಲ್‍ಗಳು, ಹಲವಾರು ಏಕ ಮತ್ತು ಜೋಡಿ-ನಳಿಗೆ ರೈಫಲ್‍ಗಳು ಮತ್ತು ಪರಿವರ್ತಿತ ಕಾರ್ಬೈನ್‍ಗಳೂ(ಲಘು ಮೆಷಿನ್‍ಗನ್) ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಸೇರಿವೆ. ಡೇರಾ ಆಶ್ರಮದ ಆವರಣದಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಸಿರ್ಸಾ ಸಾದರ್ ಪೊಲೀಸ್ ಮುಖ್ಯಸ್ಥ ದಿನೇಶ್ ಕುಮಾರ್ ಖಚಿತಪಡಿಸಿದ್ದಾರೆ. ವಶಪಡಿಸಿಕೊಂಡ ಕೆಲವು ಶಸ್ತ್ರಾಸ್ತ್ರಗಳು ಲೈಸನ್ಸ್‍ಗಳನ್ನು ಹೊಂದಿದ್ದರೆ ಇನ್ನು ಹಲವು ಪರವಾನಗಿ ಇಲ್ಲದ ಅಕ್ರಮ ಆಯುಧಗಳು ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin