ಸಚಿವರು, ಶಾಸಕರಿಗೆ ವ್ಯಾಕರಣ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--041

ಬೆಂಗಳೂರು, ಸೆ.5- ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ ಸದಸ್ಯರು ಹಾಗೂ ಸಚಿವರಿಗೆ ಕನ್ನಡ ವ್ಯಾಕರಣದ ಪಾಠ ಹೇಳಿ ಚುರುಕು ಮುಟ್ಟಿಸಿದ ಘಟನೆ ನಡೆಯಿತು. ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿಎಂ, ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕರೊಬ್ಬರು ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಭಾಷಣ ಮಾಡುತ್ತಿದ್ದಾಗ. ಅವರ ಮಕ್ಕಳನ್ನು ಯಾವ ಶಾಲೆಯಲ್ಲಿ ಓದಿಸುತ್ತಿದ್ದಾರೆಂದು ಪ್ರಶ್ನಿಸಿದಾಗ ಖಾಸಗಿ ಶಾಲೆ ಎಂಬ ಉತ್ತರ ಬಂತು. ಇಂತಹವರು ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡುವ ನೈತಿಕತೆ ಇದೆಯೆ ಎಂದು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಚರ್ಚೆ ಮುಂದುವರೆದಾಗ ನಾನು ಅವರಿಗೆ ಸಂದಿ ಎಂದರೆಗೊತ್ತೇ ಎಂದು ಪ್ರಶ್ನಿಸಿದೆ. ಆ ಶಾಸಕರಿಗೆ ಗೊತ್ತಿರಲಿಲ್ಲ ಎಂದ ಸಿಎಂ, ವೇದಿಕೆಯತ್ತ ತಿರುಗಿ ಅಲ್ಲಿ ಕುಳಿತಿದ್ದ ಜೆಡಿಎಸ್ ಶಾಸಕ ಶರವಣ ಅವರಿಗೆ ಸಂಧಿ ಎಂದರೆ ನಿಮಗೆ ಗೊತ್ತೆ ಎಂದು ಪ್ರಶ್ನಿಸಿದರು. ಶವರಣ ಇಲ್ಲ ಎಂದಾಗ ಎಲ್ಲಿಯವರೆಗ ಓದಿದ್ದೀರಿ ಎಂದರು. 10ನೇ ತರಗತಿ ಎಂದು ಶವರಣ ಉತ್ತರಿಸಿದರು. ಅಷ್ಟಕ್ಕೆ ಸುಮ್ಮನಾಗದ ಸಿದ್ದರಾಮಯ್ಯ ಮಾತು ಮುಂದುವರೆಸಿ, ಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರತ್ತ ತಿರುಗಿ ಸಂದಿ ಎಂದರೆ ನಿಮಗೆ ಗೊತ್ತೆ ಎಂದು ಕೇಳಿದರು.

ಸೇಠ್ ಉತ್ತರಿಸಲಾಗದೆ ಪೇಚಿಗೆ ಸಿಲುಕಿದರು. ಅವರ ತಂದೆ ಸಚಿವರಾಗಿದ್ದರು. ಹಾಗಾಗಿ ತನ್ವೀರ್ ಸೇಠ್ ಕೂಡ ಖಾಸಗಿ ಇಂಗ್ಲಿಷ್ ಶಾಲೆಯಲ್ಲಿ ಓದಿದ್ದಾರೆ ಹಾಗಾಗಿ ಗೊತ್ತಿಲ್ಲ ಎಂದು ತಾವೇ ಸ್ಪಷ್ಟನೆ ನೀಡಿದರು.

Facebook Comments

Sri Raghav

Admin