ಹೈದರಾಬಾದ್‍ನಲ್ಲಿ 57 ಅಡಿ ಗಣಪ ವಿಸರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

Ganesha--01

ಹೈದರಾಬಾದ್, ಸೆ.5-ವಿಜೃಂಭಣೆಯ ಗಣೇಶೋತ್ಸವ ಆಚರಣೆಯಲ್ಲಿ ಮುತ್ತಿನನಗರಿ ಹೈದರಾಬಾದ್‍ಗೆ ಮುಂಬೈ ನಂತರ ಎರಡನೇ ಸ್ಥಾನ. 11 ದಿನಗಳ ಅದ್ದೂರಿ ವಿನಾಯಕ ಚೌತಿಗೆ ಇಂದು ಅಂತಿಮ ತೆರೆಬಿದ್ದಿದ್ದು, ಮುಂಜಾನೆಯಿಂದಲೇ ಸಾವಿರಾರು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುತ್ತಿದೆ. ಅತಿ ಎತ್ತರದ ಅಂದರೆ 57 ಅಡಿಗಳ ಗಜಾನನ ವಿಗ್ರಹವನ್ನು ಅಪಾರ ಭಕ್ತಗಣದ ಸಮ್ಮುಖದಲ್ಲಿ ವಿರ್ಸಜಿಸಲಾಗಿದೆ.

ಹೈದರಾಬಾದ್‍ನ ಹುಸೇನ್ ಸಾಗರ ಸರೋವರ ಮತ್ತು ಇತರ ಜಲಾಶಯಗಳಲ್ಲಿ ವಿವಿಧ ಗಾತ್ರ, ಆಕಾರ ಮತ್ತು ವರ್ಣಗಳ ಸಹಸ್ರಾರು ಗಣಪನ ವಿಗ್ರಹಗಳನ್ನು ಸಾಂಸ್ಕøತಿಕ ಮತ್ತು ಜನಪದ ಮೆರವಣಿಗೆ ಮೂಲಕ ಭಾರೀ ಸಂಖ್ಯೆ ಭಕ್ತರು ಕೊಂಡೊಯ್ಡು ಶ್ರದ್ಧಾ-ಭಕ್ತಿಗಳೊಂದಿಗೆ ವಿಸರ್ಜಿಸಿದರು.  ಖೈರಾತಾಬಾದ್ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗಿದ್ದ 57 ಅಡಿಗಳ ಎತ್ತರದ ಗಜಮುಖನನ್ನು ವಿಶೇಷ ವಾಹನದಲ್ಲಿ ಕೊಂಡೊಯ್ಡು ಹುಸೇನ್ ಸಾಗರ್ ಸರೋವರದಲ್ಲಿ ಮುಳುಗಿಸಲಾಯಿತು.

ಹೈದರಾಬಾದ್ ನಗರಾದ್ಯಂತ ನಡೆದ ಸಾಮೂಹಿಕ ವಿಸರ್ಜನೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ 25,000ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿತ್ತು.

Facebook Comments

Sri Raghav

Admin