ಆಂಗ್ ಸಾನ್ ಸೂ ಕೀ – ಪ್ರಧಾನಿ ನರೇಂದ್ರ ಮೋದಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Modi--mynmar--01

ನೈ ಪೀ ಟೌ, ಸೆ.6-ಮ್ಯಾನ್ಮಾರ್‍ನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನಾಯಕಿ ಆಂಗ್ ಸಾನ್ ಸೂ ಕೀ ಅವರನ್ನು ಭೇಟಿ ಮಾಡಿ ಗಹನ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಮ್ಯಾನ್ಮಾರ್‍ನ ರೊಖೈನ್ ರಾಜ್ಯದಲ್ಲಿ ರೋಹಿಂಗ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ಭಾರೀ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲೇ ಮೋದಿ ಆ ದೇಶದ ಪ್ರವಾಸ ಕೈಗೊಂಡಿದ್ದಾರೆ.  ಸೂ ಕೀ ಅವರೊಂದಿಗೆ ನಡೆದ ಮಾತುಕತೆ ಸಂದರ್ಭದಲ್ಲಿ ಜನಾಂಗೀಯ ವಿದ್ವೇಷದ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು. ಹಿಂಸಾಚಾರದಿಂದಾಗಿ ರೋಹಿಂಗ್ಯ ಮುಸ್ಲಿಮರು ಭಾರತದತ್ತ ಸಾಮೂಹಿಕ ವಲಸೆ ಹೋಗುತ್ತಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆಸಲಾಯಿತು.

ಮೋದಿ ಮತ್ತು ಸೂ ಕೀ ಹಲವು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.  ಇದಕ್ಕೂ ಮುನ್ನ ನಿನ್ನೆ ಮೋದಿ ಮ್ಯಾನ್ಮಾರ್ ಅಧ್ಯಕ್ಷ ಯು ಹಿತ್ನ್ ಕ್ಯಾವ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಭದ್ರತೆ, ಭಯೋತ್ಪಾದನೆ ನಿಗ್ರಹ, ವ್ಯಾಪಾರ ಮತ್ತು ಬಂಡವಾಳ ಹೂಡಿಕೆ, ಮೂಲಸೌಕರ್ಯಾಭಿವೃದ್ಧಿ, ಇಂಧನ ಇತ್ಯಾದಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಮತ್ತಷ್ಟು ಬಲಗೊಳಿಸುವ ಉಭಯ ದೇಶಗಳು ನಿರ್ಧರಿಸಿವೆ.

Facebook Comments

Sri Raghav

Admin