ಇದು ಅತ್ಯಂತ ಹೇಯ ಕೃತ್ಯ : ಮಾಜಿ ಪ್ರಧಾನಿ ದೇವೇಗೌಡ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

Devegowda-2

ಬೆಂಗಳೂರು, ಸೆ.6-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರವಾಗಿ ಖಂಡಿಸಿದ್ದಾರೆ.ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ನಂತರ ನಡೆದಿರುವ ಎರಡನೇ ಹತ್ಯೆ ಇದಾಗಿದ್ದು, ಇದು ಅತ್ಯಂತ ಹೇಯವಾದ ಕೃತ್ಯವಾಗಿದೆ ಎಂದಿದ್ದಾರೆ.  ಮನೆಯ ಆವರಣದಲ್ಲೇ ಶೂಟೌಟ್ ಮಾಡಿ ಹತ್ಯೆಗೈದಿರುವುದು ಆತಂಕ ಉಂಟು ಮಾಡಿದೆ. ಇದು ಕ್ರೂರ ಹತ್ಯೆಯಾಗಿದೆ ಎಂದು ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿರುವ ಗೌಡರು, ಗೌರಿ ಲಂಕೇಶ್ ಕುಟುಂಬ ವರ್ಗಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin