ಉಗ್ರರಿಗೆ ಹಣಕಾಸು ನೆರವು : ಕಾಶ್ಮೀರ ಮತ್ತು ದೆಹಲಿಯ 16 ಕಡೆ ಎನ್‍ಐಎ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

NIA--01

ನವದೆಹಲಿ, ಸೆ.6-ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ರಾಷ್ಟೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತಷ್ಟು ಚುರುಕುಗೊಳಿಸಿದೆ. ಹವಾಲಾ ದಂಧೆ ಮತ್ತು ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ಮೂಲವನ್ನು ಚಿವುಟಿ ಹಾಕಲು ಎನ್‍ಐಎ ಅಧಿಕಾರಿಗಳು ಇಂದು ಜಮ್ಮು-ಕಾಶ್ಮೀರ ಹಾಗೂ ದೆಹಲಿಯಲ್ಲಿ ಒಟ್ಟು 16 ಕಡೆ ದಾಳಿ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕಣಿವೆ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶದಿಂದ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಸಂಘಟನೆಗಳು ಮತ್ತು ಉಗ್ರರ ಬೆಂಬಲಿಗರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ಮುಂದುವರಿದಿದೆ.

ಕಣಿವೆ ರಾಜ್ಯ ಕಾಶ್ಮೀರದ ಉತ್ತರ ಭಾಗ ಮತ್ತು ಶ್ರೀನಗರದ 11 ಸ್ಥಳಗಳು ಹಾಗೂ ರಾಜಧಾನಿ ನವದೆಹಲಿಯ ಐದು ಕಡೆಗಳಲ್ಲಿ ಏಕಕಾಲದಲ್ಲಿ ಈ ದಾಳಿ ನಡೆದಿದ್ದು, ಶೋಧ ಮುಂದುವರಿದಿದೆ. ವ್ಯಾಪಾರಿಗಳು ಮತ್ತು ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿರುವವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ದೆಹಲಿಯಲ್ಲೂ ಐದು ಕಡೆ ದಾಳಿ ಮಾಡಿ ಐವರು ವರ್ತಕರಿಂದ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಏಳು ಪ್ರತ್ಯೇಕತಾವಾದಿ ನಾಯಕರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು.

ಕಾಶ್ಮೀರದ ಖ್ಯಾತ ಉದ್ಯಮಿ ಝಹೂರ್ ವಟಾಲಿಯನ್ನು ಸಹ ಇದೇ ಕಾರಣಕ್ಕಾಗಿ ಎನ್‍ಐಎ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇತತಾ ಹೋರಾಟಕ್ಕೆ ಮತ್ತು ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಹಣ ಕ್ರೋಢೀಕರಿಸಲಾಗುತ್ತಿದ್ದು, ಈ ಜÁಲವನ್ನು ಮಟ್ಟ ಹಾಕಲು ಬಿರುಸಿನ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin