ಪೊಲೀಸರು ಆದಷ್ಟು ಬೇಗ ಹಂತಕರನ್ನು ಬಂಧಿಸುತ್ತಾರೆಂಬ ವಿಶ್ವಾಸವಿದೆ : ಇಂದ್ರಜಿತ್ ಲಂಕೇಶ್

ಈ ಸುದ್ದಿಯನ್ನು ಶೇರ್ ಮಾಡಿ

Indajit-Lankesh--01

ಬೆಂಗಳೂರು, ಸೆ.6-ಹಿರಿಯ ಪತ್ರಕರ್ತೆ ಮತ್ತು ಪ್ರಗತಿಪರ ಚಿಂತಕಿ ಗೌರಿಲಂಕೇಶ್ ಅವರನ್ನು ಕಗ್ಗೊಲೆ ಮಾಡಿದ ಹಂತಕರು ಶೀಘ್ರ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಅವರ ಸಹೋದರ ಹಾಗೂ ಪತ್ರಕರ್ತ ಮತ್ತು ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳು ಮತ್ತು ನನ್ನ ಸಹೋದರಿಯ ಮೊಬೈಲ್‍ಫೋನ್ ಕರೆಗಳ ಸಾಕ್ಷ್ಯಾಧಾರಗಳ ಸಹಾಯದೊಂದಿಗೆ ಹಂತಕರು ಶೀಘ್ರವೇ ಸೆರೆ ಸಿಕ್ಕುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು. ಆಕೆಯ ಮೊಬೈಲ್ ಫೋನ್‍ನಲ್ಲಿ ದಾಖಲಾದ ಕರೆಗಳು ಸಾಕಷ್ಟು ಸಾಕ್ಷ್ಯ ಮತ್ತು ಸುಳಿವು ನೀಡುತ್ತದೆ. ತನಿಖೆ ಮುಂದುವರೆಯುತ್ತಿದೆ. ತನಿಖೆಗೆ ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

Facebook Comments

Sri Raghav

Admin