ಬರೀ ಕೈನಲ್ಲಿ ಮ್ಯಾನ್‍ಹೋಲ್ ಕ್ಲೀನ್ : ತೀವ್ರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.6-ಭಾರೀ ಮಳೆಗೆ ನಗರದ ಮ್ಯಾನ್‍ಹೋಲ್‍ಗಳು ತುಂಬಿ ಹರಿಯುತ್ತಿದ್ದು, ಯಾವುದೇ ರಕ್ಷಣಾ ಉಪಕರಣಗಳನ್ನು ಬಳಸದೆಯೇ ಪೌರಕಾರ್ಮಿಕರಿಂದ ಇವುಗಳನ್ನು ಸ್ವಚ್ಛಪಡಿಸುತ್ತಿದ್ದು, ಇದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಮೇಯರ್ ಹಾಲಿ ಸದಸ್ಯ ಭೈರಪ್ಪ ಅವರು ಪ್ರತಿನಿಧಿಸುವ 12ನೆ ವಾರ್ಡ್‍ನಲ್ಲಿ ಪೌರಕಾರ್ಮಿಕರು ಬರೀ ಕೈನಲ್ಲಿ ಮ್ಯಾನ್‍ಹೋಲ್ ಸ್ವಚ್ಛಪಡಿಸಿದರು. ನಗರ ಪಾಲಿಕೆಯಲ್ಲಿ ಜೆಟ್‍ಮಿಷನ್‍ಗಳು ಇವೆ. ರಕ್ಷಣಾ ಸಾಮಗ್ರಿಗಳು ಇವೆ. ಕನಿಷ್ಠ ಗ್ಲೌಸ್, ಶೂಗಳನ್ನು ಹಾಕದೆ ಕೈಗಳಿಂದ ಪೌರಕರ್ಾುಕರು ಸ್ವಚ್ಛಪಡಿಸಿದರು. ಪಾಲಿಕೆ ಸದಸ್ಯರಿಗೆ ಕನಿಷ್ಠ ಮಾನವೀಯತೆಯೂ ಇಲ್ಲವೆ ಪೌರಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Facebook Comments

Sri Raghav

Admin