ಸ್ವಯಂ ಘೋಷಿತ ದೇವತೆ ರಾಧೆ ಮಾಗೂ ಬಂಧನ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

Radhe-Maa

ಪಂಜಾಬ್,ಸೆ.6-ಪಂಜಾಬ್ ಪೊಲೀಸರಿಗೆ ಸ್ವಯಂ ಘೋಷಿತ ದೇವತೆ ಎಂದೇ ಬಿಂಬಿಸಿಕೊಂಡಿರುವ ರಾಧೆ ಮಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ನೀಡಿದೆ.  ರಾಧೆ ಮಾ ವಿರುದ್ಧ ವಿಶ್ವ ಹಿಂದೂ ಪರಿಷತ್ ಮಾಜಿ ಸದಸ್ಯರಾದ ಸುರೇಂದ್ರ ಮಿತ್ತಲ್ ಪ್ರಕರಣ ದಾಖಲಿಸಿದ್ದ ಹಿನ್ನಲೆಯಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದ್ದು , ತನ್ನ ವಿರುದ್ಧ ಮಾತನಾಡಬಾರದು ಎಂದು ಪದೇ ಪದೇ ರಾಧೆಮಾ ಅವರು ಬೆದರಿಕೆಯೊಡ್ಡುತ್ತಿದ್ದರು ಎಂದು ಸುರೇಂದ್ರ ಮಿಟ್ಟಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಹಿಂದೆ ಮುಂಬೈನ ಮಹಿಳೆಯೊಬ್ಬರು ರಾಧೆ ಮಾ ವಿರುದ್ಧದ ಪ್ರಕರಣದ ಮೂಲಕ ಸ್ವಯಂ ಘೋಷಿತ ದೇವತೆ ವಿವಾದಕ್ಕೆ ಸಿಲುಕಿದ್ದರು. ತನ್ನ ಪತಿಯ ಕುಟುಂಬಿಕರನ್ನು ಎತ್ತಿಕಟ್ಟಿ ರಾಧೆ ಮಾ ತಮಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮುಂಬೈ ಮಹಿಳೆ ಆರೋಪಿಸಿದ್ದರು.

Facebook Comments

Sri Raghav

Admin