ಇರ್ಮಾ ಚಂಡಮಾರುತಕ್ಕೆ ರೆಬಿಯನ್ ದ್ವೀಪ ಸೆಂಟ್ ಮಾರ್ಟಿನ್ ನಾಶ, ಸಾವು-ನೋವು

ಈ ಸುದ್ದಿಯನ್ನು ಶೇರ್ ಮಾಡಿ

Irma--01

ಪಾಯಿಂಟೆ-ಪಿಟ್ರೆ, ಸೆ.7-ಕೆರೆಬಿಯನ್ ದ್ವೀಪ ಸೇಂಟ್ ಮಾರ್ಟಿನ್ ಮೇಲೆ ಅಪ್ಪಳಿಸಿದ ವಿನಾಶಕಾರಿ ಇರ್ಮಾ ಚಂಡಮಾರುತದಿಂದ ಶೇ.95ರಷ್ಟು ಪ್ರದೇಶ ನಾಶವಾಗಿದ್ದು, ಸಾವು-ನೋವು ಸಂಭವಿಸಿದೆ. ಇದೊಂದು ಭಾರೀ ನೈಸರ್ಗಿಕ ವಿಕೋಪ. ಫ್ರೆಂಚ್‍ನ ಒಂದು ಭಾಗವಾದ ಈ ದ್ವೀಪ ಬಹುತೇಕ ನಿರ್ನಾಮವಾಗಿದೆ. ಚಂಡಮಾರುತದ ರೌದ್ರಾವತಾರಕ್ಕೆ ನಾನು ದಿಗ್ಭ್ರಮೆಗೊಂಡು ಭಯಭೀತನಾಗಿದ್ದೇನೆ ಎಂದು ಸ್ಥಳೀಯ ಉನ್ನತಾಧಿಕಾರಿ ಡೇನಿಯಲ್ ಗಿಬ್ಸ್ ರೇಡಿಯೋ ಕೆರೆಬಿಯನ್ ಇಂಟರ್‍ನ್ಯಾಷನಲ್ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

Irma--03

ಈ ದ್ವೀಪದಲ್ಲಿ ಚಂಡಮಾರುತದಿಂದ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ನೂರಾರು ದ್ವೀಪವಾಸಿಗಳು ಗಾಯಗೊಂಡಿದ್ದು, ಭಾರೀ ಪ್ರಮಾಣದ ನಷ್ಟವಾಗಿದೆ.  ಈ ದ್ವೀಪ ಹೊರ ಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದು, ಆಪತ್ತಿನಲ್ಲಿರುವ ಸಂತ್ರಸ್ತರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

Irma--02

Irma--04

Facebook Comments

Sri Raghav

Admin