ಒಂದೇ ದಿನ ಹಳಿ ತಪ್ಪಿದ ಎರಡನೇ ರೈಲು

ಈ ಸುದ್ದಿಯನ್ನು ಶೇರ್ ಮಾಡಿ

Rajdhani--01

ನವದೆಹಲಿ, ಸೆ.7-ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಶಕ್ತಿಕುಂಜ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಕೆಲವೇ ಗಂಟೆಗಳಲ್ಲಿ ರಾಜಧಾನಿ ದೆಹಲಿಯ ಮಿಂಟೋ ಸೇತುವೆ ಬಳಿ ಮತ್ತೊಂದು ರೈಲಿನ ಎಂಜಿನ್ ಮತ್ತು ಬೋಗಿ ಉರುಳಿ ಬಿದಿದ್ದೆ. ಅದೃಷ್ಟವಶಾತ್ ಈ ಘಟನೆಯಲ್ಲೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ದೆಹಲಿ-ರಾಂಚಿ ರಾಜಧಾನಿ ಎಕ್ಸ್‍ಪ್ರೆಸ್‍ನ ಎಂಜಿನ್ ಮತ್ತು ಪವರ್ ಕೋಚ್ ಇಂದು ಮಧ್ಯಾಹ್ನ ಹಳಿ ತಪ್ಪಿತು. ಯಾವ ಪ್ರಯಾಣಿಕರೂ ಗಾಯಗೊಂಡಿಲ್ಲ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

Facebook Comments

Sri Raghav

Admin