ಗೌರಿ ಹತ್ಯೆಗೂ ಲಿಂಗಾಯಿತ ವೀರಶೈವರ ಸಂಘರ್ಷಕ್ಕೂ ಸಂಬಂಧವಿಲ್ಲ : ಈಶ್ವರ್ ಖಂಡ್ರೆ

ಈ ಸುದ್ದಿಯನ್ನು ಶೇರ್ ಮಾಡಿ

Eshwar-Khandre--01

ಬೆಂಗಳೂರು,ಸೆ.7-ಗೌರಿ ಲಂಕೇಶ್ ಅವರ ಹತ್ಯೆಗೂ, ಲಿಂಗಾಯಿತ ವೀರಶೈವರ ನಡುವಿನ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಹೇಳಿದರು.  ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸುದ್ದಿಗಳು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ. ಮುಂದೆ ಇಂತಹ ಹತ್ಯೆಗಳು ನಡೆಯಬಾರದು ಎಂದು ಹೇಳಿದರು.  ಲಿಂಗಾಯಿತ ಧರ್ಮದ ಬೇಡಿಕೆ ಹೊಸದೇನಲ್ಲ. ಈಗ ಯಾರೋ ಕಣ್ಣು ತೆರೆದು ಧರ್ಮಕ್ಕಾಗಿ ಬೇಡಿಕೆ ಇಟ್ಟಿಲ್ಲ.

ವೀರಶೈವ ಮಹಾಸಭಾ 50 ವರ್ಷಗಳಿಂದ ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ. 59 ಮಂದಿ ಶಾಸಕರ ಸಹಿ ಮಾಡಿ ಇಂದಿನ ಯುಪಿಎ ಸರ್ಕಾರದ ಗೃಹ ಸಚಿವರಾಗಿದ್ದ ಸುಶೀಲ್ ಕುಮರ್ ಶಿಂಧೆ ಅವರಿಗೆ ಪ್ರತ್ಯೇಕ ಧರ್ಮಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಆ ಮನವಿ ತಿರಸ್ಕಾರ ಅಥವಾ ಅಂಗೀಕಾರವಾಗಿಲ್ಲ. ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಇಂದು ಸಕಾಲವಲ್ಲ ಎಂದರು.  ಲಿಂಗಾಯಿತರು ಬೇರೆ, ವೀರಶೈವರು ಬೇರೆ ಎಂದು ಪ್ರತಿಪಾದಿಸುವುದಿಲ್ಲ. ಇಬ್ಬರನ್ನು ಒಗ್ಗೂಡಿಸುವ ಪ್ರಯತ್ನ ಮುಂದುವರೆಯುತ್ತಿದೆ. ತಜ್ಞರ ಸಮಿತಿ ಮಾಡುವುದಾದರೆ ಯಾರು ಬೇಡ ಎಂದಿಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin