‘ಚಡ್ಡಿಗಳ ಮಾರಣಹೋಮ’ ಎಂದು ಬರೆದಿದ್ದೇ ಗೌರಿ ಹತ್ಯೆಗೆ ಕಾರಣವಾಯಿತೆ..?

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh--01

ಕೊಪ್ಪ, ಸೆ.7-ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್.ಜೀವರಾಜ್ ನಿನ್ನೆ ನಡೆದ ಬೈಕ್ ರ್ಯಾಲಿ ಹಾಗೂ ಬಹಿರಂಗ ಸಭೆ ಭಾಷಣದಲ್ಲಿ ಚಡ್ಡಿಗಳ ಮಾರಣಹೋಮ ಅಂಥ ಬರೆದಿದ್ದೇ ಗೌರಿ ಲಂಕೇಶ್ ಹತ್ಯೆಗೆ ಕಾರಣ ಎಂಬ ಅರ್ಥ ಬರುವ ರೀತಿ ಮಾತನಾಡಿದ್ದಾರೆ. ಈ ಹತ್ಯೆಯ ಆರೋಪಿಗಳು ಯಾರು ಎಂಬುದು ಇವರಿಗೆ ಸ್ಪಷ್ಟವಾಗಿ ಗೊತ್ತಾದಂತ್ತಿದೆ. ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್‍ಕರುಮನಿ ಮುಂತಾದವರು ಕೊಪ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯಾಗಿರುವುದು ಖಂಡನೀಯ. ಅವರ ಅಂತ್ಯಕ್ರಿಯೆ ನಡೆಯುವ ಮುನ್ನವೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿಷೇಧಾಜ್ಞೆಯನ್ನು ಮೀರಿ ನಿನ್ನೆ ಶಾಸಕ ಡಿ.ಎನ್.ಜೀವರಾಜ್ ಕೊಪ್ಪಾದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿ ನಡೆಸಿ. ಗೌರಿ ಕೊಲೆಯನ್ನು ಸಮರ್ಥಿಸಿದ್ದಲ್ಲದೆ, ಮತೀಯ ದ್ವೇಷ ಹಾಗೂ ಗುಂಪು ಘರ್ಷಣೆಗೆ ಕಾರಣವಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಭಾಷಣದ ಸಂಪೂರ್ಣ ವಿಡಿಯೋವನ್ನ ಪೊಲೀಸ್ ಇಲಾಖೆ ರೆಕಾರ್ಡ್ ಮಾಡಿದ್ದು, ಶಾಸಕರ ಈ ಹೇಳಿಕೆಯನ್ನು ಗಮನಿಸಿದರೆ ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳು ಯಾರು ಎಂಬುದು ಸ್ಪಷ್ಟವಾಗಿದ್ದು, ಶಾಸಕ ಜೀವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹತ್ಯೆಯ ಆರೋಪಿಗಳನ್ನು ಬಂಧಿಸಿ ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Facebook Comments

Sri Raghav

Admin