ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ 42 ಸ್ತಬ್ಧ ಚಿತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ

Jamboo-Savari

ಮೈಸೂರು, ಸೆ.7- ಈ ಬಾರಿಯ ಮೈಸೂರು ದಸರಾ ಜಂಬು ಸವಾರಿ ಮೆರವಣಿಗೆಯಲ್ಲಿ 42 ಸ್ತಬ್ಧ ಚಿತ್ರಗಳು ಸಾಗಿ ಬರಲಿವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್ ತಿಳಿಸಿದರು.  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸ್ತಬ್ದ ಚಿತ್ರ ಉಪಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 35 ಸ್ತಬ್ದ ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. 30 ಜಿಲ್ಲಾ ಪಂಚಾಯಿತಿಗಳಿಂದ ತಲಾ ಒಂದೊಂದು ಸ್ತಬ್ದ ಚಿತ್ರಗಳು, ರಾಜ್ಯ ವಲಯದಿಂದ ಕೌಶಲ್ಯ ಕರ್ನಾಟಕ ಪ್ರವಾಸೋದ್ಯ, ಕನ್ನಡ ಸಂಸ್ಕøತಿ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ತಲಾ ಒಂದೊಂದು ಸ್ತಬ್ದ ಚಿತ್ರಗಳನ್ನು ಸಿದ್ದಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸೆ.11ರಿಂದ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಆವರಣದಲ್ಲಿ ಸ್ತಬ್ದ ಚಿತ್ರಗಳ ಕೆಲಸ ಆರಂಭವಾಗಲಿದೆ. ಸೆ.25ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ತಬ್ಧ ಚಿತ್ರಗಳು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.  ಸೆ.28ರಂದು ಸ್ತಬ್ಧ ಚಿತ್ರಗಳ ಪೂರ್ವ ಮೆರವಣಿಗೆ ನಡೆಸಲಾಗುವುದು. ಸೆ.30ರಂದು ನಡೆಯುವ ಜಂಬು ಸವಾರಿ ಮೆರವಣಿಗೆಯಲ್ಲಿ ಎಲ್ಲಾ ಸ್ತಬ್ದ ಚಿತ್ರಗಳು ಭಾಗವಹಿಸಲಿದ್ದು , ವಾಸ್ತುಶಿಲ್ಪ , ಸಂಸ್ಕøತಿ, ಪರಿಸರ, ಅಂತರ್ಜಾಲ, ಅರಣ್ಯೀಕರಣ ಕುರಿತ ಸ್ತಬ್ದ ಚಿತ್ರಗಳನ್ನು ಸಿದ್ದಪಡಿಸಲಾಗುವ ಎಂದು ಮಾಹಿತಿ ನೀಡಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin